ಉಪ್ಪಳ: ರಸ್ತೆ ಬದಿಯ ಮರ ಮುರಿದು ಬಿದ್ದು ಎರಡು ವಾಹನಗಳು ಹಾನಿಗೀಡಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಹೊಸಂಗಡಿ-ಆನೆಕಲ್ಲು ರಸ್ತೆಯ ಹಲಸಿನಕಟ್ಟೆ ಎಂಬಲ್ಲಿನ ರಸ್ತೆ ಬದಿಯಲ್ಲಿರುವ ಮರದ ರೆಂಬೆ ಮುರಿದು ಬಿದ್ದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಪಿಕಪ್ ಹಾಗೂ ಸ್ಕೂಟರ್‌ನ ಮೇಲೆ ಮರದ ರೆಂಬೆ ಬಿದ್ದಿದ್ದು, ಪ್ರಯಾಣಿಕರು ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಅಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಎದುರಾಯಿತು.
