ತೂಮಿನಾಡು ಪರಿಸರದಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ

ಮಂಜೇಶ್ವರ: ತೂಮಿನಾಡು ಶ್ರೀ ಮಹಾಕಾಳಿ ದೈವಸ್ಥಾನ ಮತ್ತು ಮಹಾಕಾಳಿ ಭಜನಾ ಮಂದಿರದ ವಠಾರದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು. ನಿನ್ನೆ ಸಂಜೆ 5.20 ರ ವೇಳೆ ಕ್ಷೇತ್ರ ಪರಿಸರದಿಂದ ಹೊರಟ ಪಾದಯಾತ್ರೆ ಇಂದು ಮುಂಜಾನೆ 6 ಗಂಟೆಗೆ ಕಟೀಲು ಕ್ಷೇತ್ರಕ್ಕೆ ತಲುಪಿದೆ. 40 ಮಂದಿ ಮಹಿಳೆಯರು, 20 ಪುರುಷರು ಸೇರಿದ 60 ಮಂದಿಯ ತಂಡ ಪಾದಯಾತ್ರೆ ನಡೆಸಿದೆ. ದೇವದಾಸ್ ಶೆಟ್ಟಿ ತೂಮಿನಾಡು, ಆಶಾ ಕಣ್ವತೀರ್ಥ ನೇತೃತ್ವ ವಹಿಸಿದರು.

You cannot copy contents of this page