ಔಷಧ ಸಾಮಗ್ರಿಗಳ ಸುಂಕ ಶೇ.100ಕ್ಕೇರಿಸಿದ ಟ್ರಂಪ್

ನವದೆಹಲಿ: ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳ ಮೇಲೆ ಸುಂಕ ದಾಳಿ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅಮೆರಿಕಕ್ಕೆ ಪ್ರವೇಶಿಸುವ ಎಲ್ಲಾ ಬ್ರಾಂಡಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಸುಂಕವನ್ನು ಶೇ. 100ಕ್ಕೇರಿಸಿ ಹೊಸ ಅಧಿಸೂಚನೆ ಜ್ಯಾರಿಗೊಳಿಸಿದ್ದಾರೆ. ಈ ಸುಂಕವು ಅಕ್ಟೋಬರ್ 1ರಿಂದ ಜ್ಯಾರಿಗೆ ಬರಲಿದೆ. ಆದರೆ ಔಷಧ ಕಂಪೆನಿಗಳು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದರೆ ಅವುಗಳು ಸುಂಕಗಳಿಂದ ಪ್ರಭಾವಿತವಾಗುವುದಿ ಲ್ಲವೆಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಟ್ರಂಪ್‌ರ ಈ ಸುಂಕ ಸಮರ ಭಾರತ ಮಾತ್ರವಲ್ಲ ಇತರ ಎಲ್ಲಾ ದೇಶಗಳ ಮೇಲೂ ತೀವ್ರ ಪ್ರತಿಕೂಲ ಪರಿಣಾಮ ಭೀರುವ ಸಾಧ್ಯತೆ ಇದೆ.

You cannot copy contents of this page