ಹೊಸದಿಲ್ಲಿ: ಪ್ರಪಂಚದ ಅತ್ಯಂತ ಬಲಿಷ್ಠ ಆರ್ಥಿಕತೆಯಲ್ಲಿ ಒಂದಾಗಿರುವ ಭಾರತದ ಮೇಲೆ ತೆರಿಗೆಯುದ್ಧಕ್ಕಿಳಿದಿ ರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೀತಿ ವಿರುದ್ಧ ಅಮೆರಿಕದ ಆರ್ಥಿಕ ತಜ್ಞರೇ ಈಗ ರಂಗಕ್ಕಿಳಿದಿ ದ್ದಾರೆ. ಭಾರತದ ವಿರುದ್ಧ ಅಮೆರಿಕ ಸಾರಿರುವ ಆರ್ಥಿಕ ಸಮರ ಆನೆಯ ಮೇಲೆ ಇಲಿ ಹೊಡೆದಂತಾಗಲಿದೆ. ತೆರಿಗೆ ಸಮರ ಮೂಲಕ ತನ್ನ ಕಾಲಿಗೆ ತಾನೇ ಗುಂಡು ಹೊಡೆದಂತೆ ಎಂದು ಅಮೆರಿಕದ ಖ್ಯಾತ ಆರ್ಥಿಕ ತಜ್ಞ ರಿಚಾರ್ಜ್ ಊಲ್ಫ್ ಹೇಳಿದ್ದಾರೆ. ವಿಶ್ವಸಂಸ್ಥೆ ಲೆಕ್ಕಾಚಾರ ಪ್ರಕಾರ ಭಾರತ ಭೂಮಿಯ ಮೇಲೆ ಅತೀ ದೊಡ್ಡ ಆರ್ಥಿಕ ಸುದೃಢ ದೇಶವಾಗಿದೆ. ಇಂತಹ ಸಂದರ್ಭದಲ್ಲಿ ಭಾರತದ ವಿರುದ್ಧ ಸುಂಕ ಸಮರ ಹೇರಿರುವ ಕ್ರಮ ಅಮೆರಿಕಕ್ಕೆ ತಿರುಗೇಟಾಗಿ ಪರಿಣಮಿಸಲಿದೆ. ಅಮೆರಿಕ ಭಾರತದ ಜೊತೆಗಿನ ವ್ಯಾಪಾರ ವ್ಯವಹಾರಗಳನ್ನು ಕಡಿತಗೊಳಿಸಿದರೆ ತನ್ನ ರಫ್ತುಗಳ ಮಾರಾಟವನ್ನು ಭಾರತ ಇತರ ದೇಶಗಳ ಹುಡುಕಾಟ ನಡೆಸತೊ ಡಗಿದೆ. ಇಂತಹ ಕ್ರಮ ಬ್ರಿಕ್ಸ್ ದೇಶಗಳನ್ನು ಇನ್ನಷ್ಟು ಬಲಿಷ್ಟಗೊಳಿಸಲಿದೆ. ಮಾತ್ರವಲ್ಲ ಬಿಕ್ರ್ಸ್ ರಾಷ್ಟ್ರಗಳು ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ಬಲವನ್ನು ಎದುರಿಸುವ ಗುರಿ ಹೊಂದಿದೆ ಮಾತ್ರವಲ್ಲದೆ ಡಾಲರ್‌ನ ಪ್ರಾಬಲ್ಯವನ್ನು ಪ್ರಶ್ನಿಸುವ ಪರ್ಯಾಯ ಮಾರ್ಗಗಳನ್ನು ಅನುಸರಿಸಲಿದೆಯೆಂದು ಊಲ್ಫ್ ಹೇಳಿದ್ದಾರೆ.
