ಮಂಜೇಶ್ವರ: ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯನೊ ಕೂಟ ಮಂಜೇಶ್ವರ ಇದರ ದಶಮಾನೋತ್ಸವದಂಗವಾಗಿ ಮಕ್ಕಳ ದಿನಾಚರಣೆ ಪ್ರಯುಕ್ತ ತುಳುನಾಡ ಬಾಲೆ ಬಂಗಾರ್ ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧೆ ನಡೆಯಲಿದೆ. ನಾಲ್ಕು ವರ್ಷ ದೊಳಗಿನ ಮಕ್ಕಳ ಭಾವಚಿತ್ರಗಳನ್ನು ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ರೀತಿಯಲ್ಲಿ ತೆಗೆದು ಕಳುಹಿಸಬೇ ಕಾಗಿದೆ. 6X9 ಅಳತೆಯ ಭಾವಚಿ ತ್ರವನ್ನು ಕಳುಹಿಸಿದರೆ ಸಾಕಾಗುವುದು. ಚಿತ್ರದ ಹಿಂದೆ ಮಗುವಿನ ಹೆಸರು, ಹುಟ್ಟಿದ ದಿನ, ತಿಂಗಳು, ಇಸವಿ, ಜನನ ಪ್ರಮಾಣಪತ್ರದ ಕರಡು ಪ್ರತಿ, ಪೋಷಕರ ವಿಳಾಸ ಲಗತ್ತಿಸಿರಬೇಕು. ನವೆಂಬರ್ ೫ರ ಮುಂಚಿತ ಮಂಜೇಶ್ವರದಲ್ಲಿರುವ ತುಳುನಾಡ ಬಾಲೆ ಬಂಗಾರ್ ಸಮಿತಿ ಅಧ್ಯಕ್ಷ ರತನ್ ಕುಮಾರ್ ಹೊಸಂಗಡಿ, ಸಿಂಡ್ರೆಲಾ ನರ್ಸರಿ ಬಳಿ, ಹೊಸಬೆಟ್ಟು, ಮಂಜೇಶ್ವರ ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕು. ವಿಜೇತ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಬಹುಮಾನ ಗಳನ್ನು ನೀಡಲಾಗುವುದು. ನವೆಂಬರ್ 13ರಂದು ಮಂಜೇಶ್ವರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.







