ಹೊಸದುರ್ಗ: ಹೆಬ್ಬಾವನ್ನು ಹಿಡಿದು ಪದಾರ್ಥ ಮಾಡಿ ಸೇವಿಸಿದ ಇಬ್ಬರು ಯುವಕರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪಯ್ಯನ್ನೂರು ಬಳಿಯ ಪಾಣಪ್ಪುಳ ಮುಂಡಪ್ಪುರಂ ಉರುಂಬಿಲ್ ಹೌಸ್‌ನ ಯು. ಪ್ರಮೋದ್ (40), ಚಂದನಂಚೇರಿ ಹೌಸ್‌ನ ಸಿ. ಬಿನೀಶ್ (37) ಎಂಬಿವರನ್ನು ತಳಿಪರಂಬ ಫಾರೆಸ್ಟ್ ರೇಂಜ್ ಆಫೀಸರ್ ಪಿ.ಬಿ. ಸನೂಪ್ ಕುಮಾರ್ ನೇತೃತ್ವದ ತಂಡ ಸೆರೆಹಿಡಿದಿದೆ. ಮಾತಮಂಗಲಂ ಕುಟ್ಟೂರು ಎಂಬಲ್ಲಿಂದ ಆರೋಪಿ ಗಳು ಹೆಬ್ಬಾವನ್ನು ಸೆರೆಹಿಡಿದಿದ್ದರು. ಬಳಿಕ ಅದನ್ನು ಮನೆಗೆ ತಲುಪಿಸಿ ಮಾಂಸ ಮಾಡಿದ ಬಳಿಕ ಪದಾರ್ಥ ಮಾಡಿ ಸೇವಿಸಿದ್ದರೆಂದು ದೂರಲಾಗಿದೆ. ಈ ಮಧ್ಯೆ ಈ ಮಾಹಿತಿ ಅರಣ್ಯಾಧಿ ಕಾರಿಗಳಿಗೆ ಲಭಿಸಿದೆ. ಕೂಡಲೇ ಅರಣ್ಯಾಧಿಕಾರಿಗಳು ಮನೆ ಸುತ್ತುವರಿದು ಒಳಗೆ ಪ್ರವೇಶಿಸಿ ದಾಗ ಆರೋಪಿಗಳು ‘ಹೆಬ್ಬಾವಿನ ಚಿಲ್ಲಿ’ ಸೇವಿಸುತ್ತಿದ್ದರು. ಸಂರಕ್ಷಣೆ ವಿಭಾಗದಲ್ಲಿ ಒಳಗೊಂಡ ಹೆಬ್ಬಾವನ್ನು ಸೆರೆಹಿಡಿಯುವುದು ಭಾರತೀಯ ಅರಣ್ಯ ಕಾನೂನು ಪ್ರಕಾರ ೭ ವರ್ಷ ಕಠಿಣ ಸಜೆ ಹಾಗೂ ದಂಡ ಪಾವತಿಸ ಬೇಕಾದ ಅಪರಾಧವಾಗಿದೆ.
