ವಿದ್ಯಾರ್ಥಿನಿಯರನ್ನು ಕಾರಿನಲ್ಲಿ ಹಿಂಬಾಲಿಸಿ ಫೋನ್ ನಂಬ್ರ ನೀಡುವಂತೆ ಒತ್ತಾಯ: ಇಬ್ಬರ ಬಂಧನ

ಮಂಜೇಶ್ವರ: ರಸ್ತೆಯಲ್ಲಿ ನಡೆದುಹೋಗುತ್ತಿರುವ ವಿದ್ಯಾರ್ಥಿನಿಯರ ಸಹಿತ ಯುವತಿಯರನ್ನು ಕಾರಿನಲ್ಲಿ ಹಿಂಬಾಲಿಸಿ ಅವರಲ್ಲಿ ಫೋನ್ ನಂಬ್ರ ನೀಡುವಂತೆ ಒತ್ತಾಯಿಸುವ ತಂಡಗಳು ಮಂಜೇಶ್ವರ ಭಾಗದಲ್ಲಿ ವ್ಯಾಪಕಗೊಂಡ ಬಗ್ಗೆ ದೂರಲಾಗಿದೆ. ಈ ಬಗ್ಗೆ ಲಭಿಸಿದ ಒಂದು ದೂರಿನಂತೆ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ಉದ್ಯಾವರ ನಿವಾಸಿ ಜಮಾಲುದ್ದೀನ್ ಫೈಸಲ್ (39) ಹಾಗೂ ಹೊಸಬೆಟ್ಟು ನಿವಾಸಿ ರಾಫಿಲ್ (45) ಎಂಬಿವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಮೊನ್ನೆ ಸಂಜೆ ಮಂಜೇಶ್ವರ ಗೋವಿಂದ ಪೈ ಕಾಲೇಜು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ  ಇಬ್ಬರು ವಿದ್ಯಾರ್ಥಿನಿಯರನ್ನು ಜಮಾಲುದ್ದೀನ್ ಫೈಸಲ್ ಹಾಗೂ ರಾಫಿಲ್ ಕಾರಿನಲ್ಲಿ ಹಿಂಬಾಲಿಸಿ ತಡೆದು ನಿಲ್ಲಿಸಿ ಫೋನ್ ನಂಬ್ರ ಕೇಳಿದ್ದಾರೆನ್ನಲಾಗಿದೆ. ಈ ವೇಳೆ ವಿದ್ಯಾರ್ಥಿನಿಯರು ಫೋನ್ ನಂಬ್ರ ನೀಡದೆ ಅಲ್ಲಿಂದ ತಕ್ಷಣ ತಪ್ಪಿಸಿಕೊಂಡಿದ್ದರು. ಈ ಬಗ್ಗೆ ವಿದ್ಯಾರ್ಥಿನಿಯರು ನಿನ್ನೆ ಬೆಳಿಗ್ಗೆ ಮಂಜೇಶ್ವರ ಠಾಣೆಗೆ ತಲುಪಿ ಘಟನೆ ಬಗ್ಗೆ  ದೂರು ನೀಡಿದ್ದಾರೆ. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ ರಾತ್ರಿ ವೇಳೆ ಇಬ್ಬರನ್ನು ಬಂಧಿಸಿದ್ದಾರೆ. ಇವರು ಸಂಚರಿಸಿದ ಕಾರನ್ನು ವಶಕ್ಕೆ ತೆಗೆಯಲಾಗಿದೆ.

RELATED NEWS

You cannot copy contents of this page