ಆಟೋರಿಕ್ಷಾದಿಂದ ಚಿನ್ನಾಭರಣ ಕಳವುಗೈದ ಇಬ್ಬರ ಸೆರೆ

ಕಾಸರಗೋಡು: ಮಾವುಂಗಾಲ್‌ನಲ್ಲಿ  ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾದಿಂದ 7 ಪವನ್ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಾರ್ ಒಕ್ಲಾವ್ ನಿವಾಸಿ ಸುಬೈರ್ (23), ಕಾಞಂಗಾಡ್ ವಡಗರಮುಖ್‌ನ ಆಶಿಕ್ (28) ಎಂಬಿವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ವೆಳ್ಳರಿಕುಂಡ್ ಕಲ್ಲಂಜಿರ ನಿವಾಸಿ ಅಶ್ರಫ್‌ರ ಆಟೋ ರಿಕ್ಷಾದಿಂದ ಚಿನ್ನಾಭರಣವನ್ನು ಆರೋಪಿಗಳು ಕಳವುಗೈದಿದ್ದರೆನ್ನಲಾಗಿದೆ.

RELATED NEWS

You cannot copy contents of this page