ಕಾಸರಗೋಡು: ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಎನ್‌ಡಿಪಿಎಸ್ ಪಿಟ್ ಆಕ್ಟ್ ಪ್ರಕಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ಮೂಕಂಪಾರೆ ನಿವಾಸಿ ಅಲೆಕ್ಸ್ ಚಾಕೊ (28) ಎಂಬಾತನನ್ನು ಬದಿಯಡ್ಕ ಪೊಲೀಸರು ಮತ್ತು ಹೊಸದುರ್ಗ ಪಡನ್ನಕ್ಕಾಡ್ ನಿವಾಸಿ ವಿಷ್ಣು ಪಿ. (29) ಎಂಬಾತನನ್ನು ನೀಲೇಶ್ವರ ಪೊಲೀಸರು ಈ ಆಕ್ಟ್ ಪ್ರಕಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಂತರ ತಿರುವನಂತಪುರದ ಪೂಜಾಪುರ ಸೆಂಟ್ರಲ್‌ಜೈಲ್‌ಗೆ ಸಾಗಿಸಲಾಗಿದೆ. ಈ ಇಬ್ಬರು ಹಲವು ಮಾದಕದ್ರವ್ಯ ಪ್ರಕರಣಗಳ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪಿಟ್ ಎನ್ ಡಿಪಿಎಸ್ ಆಕ್ಟ್ ಪ್ರಕಾರ ಜಿಲ್ಲೆಯಲ್ಲಿ ಈ ತನಕ ೯ ಮಂದಿಯನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು ಎಎಸ್‌ಪಿ ಡಾ. ನಂದಗೋಪನ್, ಹೊಸದುರ್ಗ ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್ ಎಂಬವರ ಮೇಲ್ನೋಟದಲ್ಲಿ ಬದಿಯಡ್ಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಖಿಲ್ ಟಿ. ಮತ್ತು ನೀಲೇಶ್ವರ ಇನ್ಸ್‌ಪೆಕ್ಟರ್ ಲಿಬಿನ್ ಜೋಯ್ ಎಂಬವರು ಈ ಆರೋಪಿಗಳನ್ನು ಬಂಧಿಸಿದ್ದಾರೆ.