ಚಿಕ್ಕಮಗಳೂರಿನಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿ: ಇಬ್ಬರು ಕಣ್ಣೂರು ನಿವಾಸಿಗಳು ಮೃತ್ಯು

ಕಾಸರಗೋಡು: ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಕಣ್ಣೂರು ನಿವಾಸಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ. ಕಣ್ಣೂರು ಅಂಜರಕಂಡಿ ನಿವಾಸಿಗಳಾದ ವೆಣ್ಮಣಲ್ ಕುನ್ನುಮ್ಮಲ್ ಜಬ್ಬಾರ್‌ರ ಪುತ್ರ ಶಹೀರ್ (22), ತೇರಾಂಕಂಡಿ ಅಸೀಸ್‌ರ ಪುತ್ರ ಅನಸ್ (22) ಎಂಬಿವರು  ಮೃತಪಟ್ಟವರಾಗಿದ್ದಾರೆ. ನಿನ್ನೆ ಸಂಜೆ ಚಿಕ್ಕಮಗಳೂರು ಕಡೂರು ಎಂಬಲ್ಲಿ ಅಪಘಾತವುಂಟಾಗಿದೆ.  ಅನಸ್ ಅಪಘಾತ ಸ್ಥಳದಲ್ಲೂ ಶಹೀರ್ ಮಂಗಳೂರು ಆಸ್ಪತ್ರೆಗಿರುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಎರಡು ಸ್ಕೂಟರ್ ಗಳಲ್ಲಾಗಿ ನಾಲ್ಕು ಮಂದಿ ಪ್ರವಾಸಕ್ಕೆಂದು  ತೆರಳಿದ್ದರೆನ್ನಲಾಗಿದೆ. ಮೈಸೂರಿನಲ್ಲಿ ಸಂದರ್ಶನ ನಡೆಸಿದ ಬಳಿಕ ತಂಡ ಚಿಕ್ಕಮಗಳೂರಿಗೆ ತಲುಪಿತ್ತು. ಈ ವೇಳೆ ಶಹೀರ್ ಹಾಗೂ ಅನಸ್ ಸಂಚರಿಸುತ್ತಿದ್ದ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ.

You cannot copy contents of this page