ಇಬ್ಬರು ಯುವತಿಯರು ನಾಪತ್ತೆ: ತನಿಖೆ ತೀವ್ರ

ಕಾಸರಗೋಡು:  ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಯುವತಿಯರು ನಾಪತ್ತೆಯಾದ ಸಂಬಂಧ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.  ಪಾಡಿ ಎಡನೀರಿನ ಆಯಿಶ ಶೆರೀಫ (18), ಪಾಡಿ ನಾಲ್ತಡ್ಕದ ಗೋಪಿನಾಥನ್‌ರ ಪತ್ನಿ ಕೀರ್ತನ (22) ಎಂಬಿವರು ನಾಪತ್ತೆಯಾಗಿ ದ್ದಾರೆ. ಆಯಿಷ ಶೆರೀಫ ಬುಧವಾರ ಸಂಜೆಯಿಂದ  ನಾಪತ್ತೆಯಾಗಿರು ವುದಾಗಿ ದೂರಲಾಗಿದೆ.  ವಿದ್ಯಾನಗರದ ಸುಜುಕಿ ಶೋರೂಂಗೆ ಹೋದ ಆಯಿಷ ಮರಳಿ ಮನೆಗೆ ತಲುಪಿಲ್ಲವೆಂದು ತಂದೆ ವಿದ್ಯಾನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೀರ್ತನ ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ.  ಸಂಜೆ 3.30ಕ್ಕೆ ರೇಶನ್ ಅಂಗಡಿಗೆ ಹೋದ ಈಕೆ ಮರಳಿ ಮನೆಗೆ ತಲುಪಿಲ್ಲವೆಂದು ತಿಳಿಸಿ ಪತಿಯ ಸಹೋದರ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ.

You cannot copy contents of this page