ಕಾಸರಗೋಡು: ಸಮಸ್ತ ಕೇರಳ ಜಂಇಯತ್ತುಲ್ ಉಲಮ ಸೀನಿಯರ್ ಉಪಾಧ್ಯಕ್ಷ ಮೊಗ್ರಾಲ್ ಕಡವತ್ ದಾರುಲ್ ಸಲಾಮಿಲ್ ಯು.ಎಂ. ಅಬ್ದುಲ್ ರಹ್ಮಾನ್ ಮೌಲವಿ (86) ಇಂದು ಬೆಳಿಗ್ಗೆ ನಿಧನ ಹೊಂದಿದರು. ಚಟ್ಟಂಚಾಲ್ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ಪ್ರಧಾನ ಕಾರ್ಯದರ್ಶಿ, ಕಣ್ಣಿಯತ್ ಉಸ್ತಾದ್ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
1992ರಲ್ಲಿ ಸಮಸ್ತ ಕೇಂದ್ರ ಮುಷಾವರ ಸದಸ್ಯನಾಗಿದ್ದರು. 1991ರಿಂದ ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಮಂಡಳಿ ಸದಸ್ಯ, ಸಮಸ್ತ ಕಾಸರಗೋಡು ಜಿಲ್ಲಾ ಮುಷಾವರ ಸದಸ್ಯ, ಸಮಸ್ತ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ, ಎಂಎಸ್ಎಫ್ ಮಂಜೇಶ್ವರ ಮಂಡಲ ಚೆಯರ್ ಮೆನ್ ಆಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಸಕಿಯ, ಮಕ್ಕಳಾದ ಮುಹಮ್ಮದ್ ಶಿಹಾಬ್, ಫಸಲು ರಹ್ಮಾನ್, ನೂರುಲ್ ಅಮೀನ್, ಅಬ್ದುಲ್ಲ ಇರ್ಫಾನ್, ಶಹೀರಲಿ ಶಿಹಾಬ್ (ಎಲ್ಲರೂ ಗಲ್ಫ್), ಖದೀಜ, ಮರಿಯಂ, ಶಾಹಿನ, ಅಳಿಯ, ಸೊಸೆಯಂದಿರಾದ ಯು.ಕೆ. ಮೊಯ್ದೀನ್ ಕುಟ್ಟಿ ಮೌಲವಿ (ಮೊಗ್ರಾಲ್), ಸಿ.ಎ. ಅಬ್ದುಲ್ ಖಾದರ್ ಹಾಜಿ (ಸೌದಿ), ಇ. ಅಹಮ್ಮದ್ ಹಾಜಿ ಚೇರೂರು, ಖದೀಜ, ಮಿಸ್ರಿಯ, ಸಫೀನ, ಮಿಸ್ರಿಯ, ಜಾಸಿರ, ಜುಮಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವೆ ಪತ್ನಿ ಮರಿಯಂ, ಮಕ್ಕಳಾದ ಮುಹಮ್ಮದ್ ಮುಜೀಬ್ ರಹ್ಮಾನ್, ಆಯಿಷತ್ ಶಾಫಿದ ಎಂಬಿವರು ಈ ಹಿಂದೆ ನಿಧನ ಹೊಂದಿದ್ದಾರೆ.






