ಯು.ಪಿ. ಕುಣಿಕುಳ್ಳಾಯರು ಸದಾ ಸ್ಮರಣೀಯರು-ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುರಳೀಧರ ಬಳ್ಳಕ್ಕುರಾಯ

ಕಾಸರಗೋಡು :ಮಾಜಿ ಶಾಸಕ, ಕನ್ನಡ ಹೋರಾಟಗಾರ, ನ್ಯಾಯವಾದಿ ದಿ| ಯು.ಪಿ ಕುಣಿಕುಳ್ಳಾಯರ ಸಂಸ್ಮರಣಾ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.
ಕರ್ನಾಟಕ ಸಮಿತಿ ಅಧ್ಯಕ್ಷ, ನ್ಯಾಯವಾದಿ ಕೆ. ಮುರಳೀಧರ ಬಳ್ಳಕ್ಕುರಾಯ ಸಂಸ್ಮರಣಾ ಭಾಷಣ ಮಾಡಿದರು. ಕಾಸರಗೋಡಿನಲ್ಲಿ ಕನ್ನಡದ ಸವಲತ್ತುಗಳನ್ನು ಉಳಿಸುವುದಕ್ಕಾಗಿ ಕನ್ನಡದ ಹಿತರಕ್ಷಣೆಗಾಗಿ ಕುಣಿಕುಳ್ಳಾಯರು ಅವಿರತವಾಗಿ ಶ್ರಮಿಸಿದವರು. ಕನ್ನಡಕ್ಕೆ, ಕನ್ನಡಿಗರಿಗೆ ಅನ್ಯಾಯವಾದಾಗ ಸಂಬAಧಪಟ್ಟವರಿಗೆ ನೂರಾರು ಮನವಿ ಸಲ್ಲಿಸಿ, ನ್ಯಾಯಾಲಯದ ಮೆಟ್ಟಲೇರಿ ನ್ಯಾಯ ದೊರಕಿಸಿಕೊಟ್ಟವರು ಎಂದು ಅವರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.
ಕ.ಸಾ.ಪ ಮಾಜಿ ಗೌರವ ಕಾರ್ಯದರ್ಶಿ ಬಿ. ರಾಮಮೂರ್ತಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ.ಎ, ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ.ಎನ್. ಮೂಡಿತ್ತಾಯ, ಕನ್ನಡ ನೌಕರರ ಸಂಘದ ಮಾಜಿ ಅಧ್ಯಕ್ಷ ಡಿ. ಜಯನಾರಾಯಣ ತಾಯನ್ನೂರು ಕುಣಿಕುಳ್ಳಾಯರ ವ್ಯಕ್ತಿತ್ವ, ಸಾಧನೆ, ಕನ್ನಡಪ್ರೇಮ ಮತ್ತು ಅವರ ಒಡನಾಟದ ಕುರಿತು ಮಾತನಾಡಿದರು. ಕಾಸರಗೋಡು ಚಿನ್ನಾ, ಸಾಹಿತಿ ವೈ. ಸತ್ಯನಾರಾಯಣ, ಲೇಖಕಿ ವಿಜಯಲಕ್ಷ್ಮಿ ಶಾನುಭೋಗ್, ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ. ಎಂ ಕಾಞಂಗಾಡು, ಪತ್ರಕರ್ತ ವೀಜಿ ಕಾಸರಗೋಡು, ಸುಕುಮಾರ ಆಲಂಪಾಡಿ, ಪಿ.ದಿವಾಕರ ಅಶೋಕನಗರ, ಬಿ.ಕೆ ಪ್ರಕಾಶ, ಸಂಜೀವ ಕೆ.ಬಿ, ಪುರುಷೋತ್ತಮ ಭಟ್ ಉಪಸ್ಥಿತರಿದ್ದರು. ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು.

You cannot copy contents of this page