ಕಾಸರಗೋಡು: ಜಿಲ್ಲೆಯ ಒಟ್ಟು 38 ಗ್ರಾಮ ಪಂಚಾಯತ್‌ಗಳ ಪೈಕಿ 37ರಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಶನಿವಾರ ನಡೆದಿದೆ. ಇದರಲ್ಲಿ 18 ಪಂಚಾಯತ್‌ಗಳಲ್ಲಿ ಯುಡಿಎಫ್, 14ರಲ್ಲಿ ಎಲ್‌ಡಿಎಫ್, ೫ರಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ.
ಯುಡಿಎಫ್‌ನಲ್ಲಿ 12 ಪಂಚಾಯತ್‌ಗಳಲ್ಲಿ ಅಧ್ಯಕ್ಷ ಸ್ಥಾನ ಮುಸ್ಲಿಂ ಲೀಗ್‌ಗೆ, 5 ಪಂ.ಗಳಲ್ಲಿ ಕಾಂಗ್ರೆಸ್‌ಗೆ ಲಭಿಸಿದೆ. ಇದೇ ವೇಳೆ ಯುಡಿಎಫ್‌ಗೆ ಬಹುಮತವುಳ್ಳ ದೇಲಂಪಾಡಿ ಪಂಚಾಯತ್‌ನಲ್ಲಿ ಸಿಪಿಎಂ ಬಂಡುಕೋರ ನೇತಾರ ಎ. ಮುಸ್ತಫ ಹಾಜಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಎಲ್‌ಡಿಎಫ್‌ಗೆ ಅಧಿಕಾರ ಲಭಿಸಿದ 14 ಪಂಚಾಯತ್‌ಗಳಲ್ಲೂ ಅಧ್ಯಕ್ಷ ಸ್ಥಾನ ಸಿಪಿಎಂಗಾಗಿದೆ.
ಕಳೆದಬಾರಿ ಜಿಲ್ಲೆಯಲ್ಲಿ ಮೂರು ಪಂಚಾಯತ್‌ಗಳಲ್ಲಿ ಮಾತ್ರವೇ ಬಿಜೆಪಿ ಆಡಳಿತವಿತ್ತು. ಅದು ಈ ಬಾರಿ ೫ಕ್ಕೇರಿದೆ. ಮಧೂರು, ಬೆಳ್ಳೂರು, ಕಾರಡ್ಕ ಪಂಚಾಯತ್‌ಗಳಲ್ಲಿ ಕಳೆದ ಬಾರಿಯೂ ಬಿಜೆಪಿ ಆಡಳಿತದಲ್ಲಿತ್ತು. ಈ ಬಾರಿ ಮೂರು ಪಂಚಾಯತ್‌ಗಳ ಹೊರತು ಬದಿಯಡ್ಕ ಹಾಗೂ ಕುಂಬ್ಡಾಜೆ ಪಂಚಾಯತ್‌ಗಳ ಆಡಳಿತವೂ ಬಿಜೆಪಿಗೆ ಲಭಿಸಿದೆ.







