ಕೇರಳದಲ್ಲಿ ಯುಡಿಎಫ್ ತರಂಗ

ತಿರುವನಂತಪುರ: ದೇಶದ ಪಂಚರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊಂಡಿ ರುವಂತೆಯೇ  ಕೇರಳದ ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ ಪ್ರಚಂಡ ಗೆಲುವಿನತ್ತ ಸಾಗತೊಡಗಿದೆ. ಇದು ಕಳದ ಹತ್ತು ವರ್ಷಗಳ ಬಳಿಕ ಕೇರಳದ ಆಡಳಿತ ಯಂತ್ರ ಯುಡಿಎಫ್ ಕೈಗೆ ಮತ್ತೆ ಲಭಿಸುವದಾರಿ ಸುಗಮಗೊಳಿಸಿದೆ.

ಕಳೆದ ಎರಡು ಚುನಾವಣೆಯಲ್ಲಿ ಸತತವಾಗಿ ಗೆದ್ದು ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದಿದ್ದ ಎಡರಂಗಕ್ಕೆ ಈ ಚುನಾವಣೆಯಲ್ಲಿ ಭಾರೀ ಹಿನ್ನಡೆ ಉಂಟಾಗಿದೆ. ಈತನಕ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 101 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಡರಂಗ 37ರಲ್ಲಿ ಹಾಗೂ ಎನ್‌ಡಿಎ 2ರಲ್ಲಿ ಮುನ್ನಡೆಯಲ್ಲಿದೆ.

RELATED NEWS

You cannot copy contents of this page