ಕಾಸರಗೋಡು: ರಸ್ತೆ ಅಪಘಾತದಲ್ಲಿ ಬೆನ್ನೆಲುಬಿಗೆ ಗಂಭೀರ ಗಾಯಗೊಂಡು ಸೊಂಟದಿಂದ ಕೆಳಗೆ ಚಲನಶಕ್ತಿ ಇಲ್ಲದೆ ಶಯ್ಯಾವಲಂಬಿಯಾಗಿ ಸಂಕಷ್ಟ ಜೀವನ ನಡೆಸುತ್ತಿರುವ ಪುತ್ರಿಯನ್ನು ಸಂಕಷ್ಟದಿಂದ ಪಾರು ಮಾಡಲು ಸಹಾಯ ಮಾಡಬೇಕೆಂದು ಆಗ್ರಹಿಸಿ ತಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಉದುಮದ ಸಿಪಿಎಂ ಮುಖಂಡ ಪಿ.ವಿ. ಭಾಸ್ಕರನ್ ಗುರುವಾರ ಸಂಜೆ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರಿಗೆ ದೂರು ನೀಡಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲ ಚಿಕಿತ್ಸೆ ನೀಡಿದರೂ ಫಲವಿಲ್ಲದ ಹಿನ್ನೆಲೆಯಲ್ಲಿ ಮನೆಗೆ ಕರೆದುಕೊಂಡು ಬಂದಾಗ ಚಿಕಿತ್ಸೆ ನೀಡಿ ಗುಣಪಡಿಸುವ ವಾಗ್ದಾನ ನೀಡಿ ಪುತ್ರಿಯನ್ನು ವಶೀಕರಿಸಿದ ಸಿದ್ಧನೆಂದು ಹೇಳಲ್ಪಡುವ ತೃಕರಿಪುರದ ರಾಶಿದ್ ಹಾಗೂ ಈತನ ಸಹಾಯಿ ತಳಿಪರಂಬ್ ಕಿಳಾಟೂರ್ ನಿವಾಸಿ ಅರ್ಜುನ್ ಎಂಬವರ ವಿರುದ್ಧ ಸಮಗ್ರ ತನಿಖೆ ನಡೆಸಬೇಕೆಂದು ದೂರಿನಲ್ಲಿ ಪ್ರಮುಖವಾಗಿ ಆಗ್ರಹಿಸಲಾಗಿದೆ. ಚಿಕಿತ್ಸೆಯ ಮರೆಯಲ್ಲಿ ಪುತ್ರಿಯ ಬ್ರೈನ್ವಾಶ್ ಮಾಡಿ ವಶೀಕರಿಸಿ ಮತಾಂತರಗೊಳಿಸಲು ಯತ್ನಿಸಿ ರುವುದಾಗಿಯೂ, ವಿವಾಹ ಭರವಸೆ ನೀಡಿರುವುದಾಗಿಯೂ ಈ ಬಗ್ಗೆ ತನಿಖೆ ನಡೆಸಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದೇನೆಂದು ಪಿ.ವಿ. ಭಾಸ್ಕರ್ ತಿಳಿಸಿದ್ದಾರೆ. ಕೋಟ್ಯಂತರ ರೂ. ವಿಮಾ ಮೊತ್ತವನ್ನು ಅಪಹರಿಸಲು ಬೇಕಾಗಿ ಈ ರೀತಿಯ ಗೂಢಾಲೋಚನೆ ನಡೆಸಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ. ಪತ್ನಿ ಹಾಗೂ ಪುತ್ರಿ ಇರುವ ಓರ್ವನಿಗೆ ಸೊಂಟದಿಂದ ಕೆಳಗೆ ಚಲನಶಕ್ತಿ ಇಲ್ಲದ ಪುತ್ರಿಯನ್ನು ವಿವಾಹ ಮಾಡಿಕೊಡಲು ಸಿದ್ಧವಾಗದ ದ್ವೇಷದಿಂದ ತನ್ನ ವಿರುದ್ಧ ಗೂಢಾಲೋಚನೆ ಇದೆ ಎಂದು ಇದರ ಹಿಂದೆ ಕಾರ್ಯಾಚರಿಸಿದವರನ್ನು ಕಾನೂನಿನ ಮುಂದೆ ತಂದು ಪುತ್ರಿಯನ್ನು ಹಾಗೂ ನನ್ನ ಕುಟುಂಬವನ್ನು ರಕ್ಷಿಸಬೇಕೆಂದು ದೂರಿನಲ್ಲಿ ವಿನಂತಿಸಿದ್ದಾರೆ. ಪುತ್ರಿಯನ್ನು ವಶೀಕರಿಸಿದವರೊಂದಿಗಿರುವ ಮದ್ಯಮ ವರದಿಗಾರರು ಸಹಿತವಿರುವವರ ಶಾಮೀಲು ಬಗ್ಗೆಯೂ ತನಿಖೆ ನಡೆಸಬೇಕೆಂದು, ಸಿದ್ಧನ ವಿರುದ್ಧ ಆತನ ಪತ್ನಿ ಬಹಿರಂಗಪಡಿಸಿದ ವಿಷಯಗಳ ಬಗ್ಗೆಯೂ ತನಿಖೆ ನಡೆಸಬೇಕೆಂದು ಭಾಸ್ಕರನ್ ಆಗ್ರಹಿಸಿದ್ದಾರೆ.
ಗುರುವಾರ ರಾತ್ರಿ ಕೊಲ್ಲಿಯಿಂದ ಎಂದು ತಿಳಿಸಿ ಒಂದು ಫೋನ್ಕಾಲ್ ತನಗೆ ಬಂದಿದೆ ಎಂದು ಭಾಸ್ಕರನ್ ತಿಳಿಸಿದ್ದಾರೆ. ಮಾದ್ಯಮ ವರದಿಗಾರ ಎಂದು ಹೇಳಲ್ಪಡುತ್ತಿರುವ ಓರ್ವನ ಸಂಬಂಧಿಕನೆಂದು ಫೋನ್ ಮಾಡಿದಾತ ತಿಳಿಸಿದ್ದಾನೆ. ಯಾರು ಕೇಳಿದರೂ ಹಣ ನೀಡಬಾರದೆಂದು ಫೋನ್ ಮಾಡಿದಾತ ಉಪದೇಶಿಸಿರುವುದಾಗಿಯೂ ಭಾಸ್ಕರನ್ ತಿಳಿಸಿದ್ದಾರೆ. ಇದೇ ವೇಳೆ ಪುತ್ರಿ ಔಷಧ ಸೇವಿಸುತ್ತಿಲ್ಲವೆಂದು ಇದರ ವಿರುದ್ಧ ಸಿದ್ಧ ಹಾಗೂ ಈತನ ತಂಡದ ಸದಸ್ಯನಾದ ಅರ್ಜುನನ್ ಬಗ್ಗೆ ಶಂಕೆ ಇದೆ ಎಂದು ಭಾಸ್ಕರನ್ ಸ್ಪಷ್ಟಪಡಿಸಿದ್ದಾರೆ.







