ವಾಟರ್ ಅಥಾರಿಟಿಯಲ್ಲಿ ಅನಧಿಕೃತ ನೇಮಕಾತಿ ರದ್ದುಗೊಳಿಸಬೇಕು-ಬಿ.ಎಂ.ಎಸ್

ಕಾಸರಗೋಡು: ಕೇರಳ ವಾಟರ್ ಅಥಾರಿಟಿ ಕಾಸರಗೋಡು ಸೆಕ್ಷನ್ ನಲ್ಲಿ ಆಪರೇಟರ್‌ಗಳ ಜನರಲ್ ಟ್ರಾನ್ಸ್‌ಫರ್‌ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ನಡೆಸಿದ ಅನಧಿಕೃತ ನೇಮಕಾತಿ ರದ್ದುಗೊಳಿ ಸಬೇಕೆಂದು ಒತ್ತಾಯಿಸಿ ಕೇರಳ ವಾಟರ್ ಅಥಾರಿಟಿ ಎಂಪ್ಲಾಯೀಸ್ ಸಂಘ್ (ಬಿಎಂಎಸ್) ಧರಣಿ ನಡೆಸಿತು.  ವರ್ಗಾವಣೆಗೊಂಡು ಬರುವ ನೌಕರರಿಗೆ ಮೇಜರ್ ಸ್ಕೀಮ್‌ಗಳಲ್ಲ್ಲಿ ನೇಮಕಾತಿ ನೀಡದೆ ಬಾಹ್ಯ ಒತ್ತಡಗಳಿಗೆ ಮಣಿದು ನ್ಯಾಯ ನಿಷೇಧಿಸುತ್ತಿರುವುದಾಗಿ ನೇತಾರರು ಆರೋಪಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಎಂಪ್ಲಾಯೀಸ್ ಸಂಘ್ ಜಿಲ್ಲಾಧ್ಯಕ್ಷ ಶಾಜಿ ಎಂ.ವಿ ಅಧಕ್ಷತೆ ವಹಿಸಿದರು.  ರಾಜ್ಯ ಉಪಾಧ್ಯಕ್ಷ ಕೆ. ಮಧುಸೂದನನ್, ರಾಜ್ಯ ಕಾರ್ಯದರ್ಶಿ ವಿ.ಕೆ. ರೆಜಿ ಕುಮಾರ್, ಬಿಎಂಎಸ್ ಕಾಸರಗೋಡು  ವಲಯ ಕಾರ್ಯದರ್ಶಿ ಬಾಬು ಮೋನ್ ಚೆಂಗಳ, ಉದುಮ ವಲಯ ಕಾರ್ಯದರ್ಶಿ ಭಾಸ್ಕರನ್ ಪೊಯಿನಾಚಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಪುರುಷೋತ್ತಮನ್ ಸ್ವಾಗತಿಸಿ, ಜಿಲ್ಲಾ ಜತೆ ಕಾರ್ಯದರ್ಶಿ ಕೆ.ಮನೋಜ್ ಕುಮಾರ್ ವಂದಿಸಿದರು.

You cannot copy contents of this page