ಅನಧಿಕೃತ ಮರಳು ಸಾಗಾಟ: ಪಿಕಪ್ ವಶ ಚಾಲಕ ಸೆರೆ

ಪೈವಳಿಕೆ: ಕಳಾಯಿ ಹೊಳೆಯಿಂದ ಅನಧಿಕೃತ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್‌ನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಠಾಣೆ ಎಸ್‌ಐ ರತೀಶ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನ ವಶಪಡಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ವೇಳೆ ಕಳಾಯಿ ಪರಿಸರದಿಂದ ಸೆರೆ ಹಿಡಿಯಲಾಗಿದೆ. ಚಾಲಕ ಮೀಯಪದವು ಬೇರಿಕೆ ನಿವಾಸಿ ಮೊಹಮ್ಮದ್ ಶಾಫಿ (27) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಎಸ್‌ಐ ಗಸ್ತು ನಡೆಸುತ್ತಿದ್ದ ವೇಳೆ ಕೊಮ್ಮಂಗಳ ಭಾಗಕ್ಕೆ ತೆರಳುತ್ತಿದ್ದ ವಾಹನಗಳನ್ನು ನಿಲ್ಲಿಸಿ ಪರಿಶೀಲಿಸಿದ ವೇಳೆ ದಾಖಲುಪತ್ರಗಳಿಲ್ಲದೆ ಮರಳು ಸಾಗಿಸುತ್ತಿದ್ದ ಪಿಕಪ್ ಕಸ್ಟಡಿಗೆ ತೆಗೆದು ಚಾಲಕನನ್ನು ಸೆರೆ ಹಿಡಿದು ಕೇಸು ದಾಖಲಿಸಿದ್ದಾರೆ.

You cannot copy contents of this page