ದೇಶವನ್ನು ಆಳ್ವಿಕೆ ನಡೆಸುವವರು ಜಾತ್ಯಾತೀತ ಮೌಲ್ಯವನ್ನು ಬುಡಮೇಲುಗೊಳಿಸುತ್ತಿದ್ದಾರೆ- ಎಂ.ವಿ. ಜಯರಾಜನ್

ಉಪ್ಪಳ: ಬಿಜೆಪಿಯ ಆಡಳಿತದ ಮೂಲಕ ದೇಶದಲ್ಲಿ ಜಾತ್ಯತೀತ ಮೌಲ್ಯಗಳು ಇಲ್ಲದಾಗುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಎಂ ವಿ ಜಯರಾಜನ್ ಹೇಳಿದರು. ಉಪ್ಪಳದಲ್ಲಿ ಡಿವೈಎಫ್‌ಐ ನಡೆಸಿದ ಸಮರ ಸಂಗಮ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಜಾತ್ಯತೀತದ ಕೇಂದ್ರವಾದ ಕೇರಳವನ್ನು ರಾಜ್ಯಪಾಲರು ವಿಭಜನೆ ಮಾಡಲು ಶ್ರಮಿಸುತ್ತಿದ್ದಾರೆ. ರಾಜೇಂದ್ರ ಅರ್ಲೇಕರ್ ಅವರ ವಿಭಜನ ನೀತಿ ಕೇರಳದಲ್ಲಿ ನಡೆಯಲ್ಲ ಎಂದು ಅವರು ಹೇಳಿದರು. ಅಬೂಬಕ್ಕರ್ ಸಿದ್ದೀಕ್ ಹುತಾತ್ಮ ಮಂದಿರದ ಶಿಲಾನ್ಯಾಸವÀನ್ನು ಎಂ.ವಿ ಜಯರಾಜನ್ ನಿರ್ವಹಿಸಿದರು. ಆಕಾಶ್ ಪೈವಳಿಕೆ ಅಧ್ಯಕ್ಷತೆ ವಹಿಸಿದ್ದರು. ಕೆ ಆರ್ ಜಯಾನಂದ, ವಿ.ವಿ ರಮೇಶನ್, ಸಾದಿಕ್ ಚೇರುಗೋಳಿ, ಹಾರಿಸ್ ಪೈವಳಿಕೆ ಮಾತನಾಡಿದರು. ವಿನಯ್ ಕುಮಾರ್ ಸ್ವಾಗತಿಸಿದರು.

You cannot copy contents of this page