ಉಪ್ಪಳ: ಅಪರಿಚಿತ ವ್ಯಕ್ತಿಯೊ ಬ್ಬರು ರೈಲು ಹಳಿ ಸಮೀಪ ಗಾಯ ಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ತಲು ಪಿಸಿದರೂ ಜೀವರಕ್ಷಿಸಲಾಗಲಿಲ್ಲ.
ಉಪ್ಪಳ ಗೇಟ್ ಅಂಚಿಕಟ್ಟೆ ಎಂಬಲ್ಲಿ ಮಂಗಳೂರು ಭಾಗಕ್ಕೆ ತೆರಳುವ ರೈಲು ಹಳಿ ಸಮೀಪದ ಪೊದೆಗಳೆಡೆ ನಿನ್ನೆ ಸಂಜೆ 5.30ರ ವೇಳೆ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಸ್ಥಳೀಯರು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದರು. ಆದರೆ ಅಷ್ಟರೊಳಗೆ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ರೈಲು ಢಿಕ್ಕಿ ಹೊಡೆದು ವ್ಯಕ್ತಿ ಗಾಯಗೊಂಡಿರುವುದಾಗಿ ಅಂದಾಜಿಸಲಾಗಿದೆ. ಮೃತ ವ್ಯಕ್ತಿ ಗಂಡಸಾಗಿದ್ದು ಸುಮಾರು 55ರಿಂದ 60 ವರ್ಷ ಪ್ರಾಯ ಅಂದಾಜಿಸಲಾಗಿದೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತ ವ್ಯಕ್ತಿ ಯಾರೆಂದು ತಿಳಿಯಲು ತನಿಖೆ ಮುಂದುವರಿಯುತ್ತಿದೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ.






