ಎಡನೀರು: ಎಡನೀರು ಮಠದಲ್ಲಿ ಧರ್ಮಸ್ಥಳ ಕ್ಷೇತ್ರದ ಭಕ್ತರು ಮತ್ತು ಅಭಿಮಾನಿಗಳ ಸಭೆ ಜರಗಿತು. ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಧರ್ಮಸ್ಥಳವು ನಮ್ಮ ನಂಬಿಕೆಯ ಪ್ರಕಾಶ ಕೇಂದ್ರವಾಗಿದ್ದು, ಅದರ ಪಾವಿತ್ರ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯ ಎಂದರು. ರಾಜಕೀಯ ಜಾತಿ ಮತ ಭೇದ ಭಾವ ಮರೆತು ಒಟ್ಟಾಗಿ ಸಹಕರಿಸಬೇಕೆಂದು ಅವರು ಕರೆ ನೀಡಿದರು. ಸೆ. 8ರಂದು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ನೇತೃತ್ವದಲ್ಲಿ ಎಡನೀರು ಮಠದಿಂದ ಧರ್ಮಸ್ಥಳಕ್ಕೆ ಬೃಹತ್ ವಾಹನ ಜಾತಾ ಹಮ್ಮಿಕೊಳ್ಳಲು ತೀರ್ಮಾನಿಸ ಲಾಯಿತು. ಅಕ್ಟೋಬರ್ 26ರಂದು ಬೃಹತ್ ಪ್ರತಿಭಟನೆ ಹಾಗೂ ಧಾರ್ಮಿಕ ಸಮ್ಮೇಳನ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಪ್ರಸ್ತಾಪಿಸಿದರು.
ಹಿಂದೂ ಐಕ್ಯವೇದಿ ಜಿಲ್ಲಾಧ್ಯಕ್ಷ ಎಸ್.ಪಿ. ಶಾಜಿ ಅಧ್ಯಕ್ಷತೆ ವಹಿಸಿದರು. ವಿ.ಹಿಂ.ಪ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ, ಪಿ.ಆರ್. ಸುನಿಲ್ ಪುಂಡೂರು, ಕೋಳಾರು ಸತೀಶ್ಚಂದ್ರ ಭಂಡಾರಿ, ಪ್ರೊ. ಶ್ರೀನಾಥ್, ಕೆ.ಎಂ. ಹೇರಳ, ಮಂಜುನಾಥ ಆಳ್ವ ಮಡ್ವ, ರಾಜೇಂದ್ರ ಕಲ್ಲುರಾಯ, ಅಶ್ವಥ್ ಪೂಜಾರಿ ಲಾಲ್‌ಬಾಗ್, ಅಖಿಲೇಶ್ ನಗುಮುಗಂ ಸಹಿತ ಹಲವರು ಭಾಗವಹಿಸಿದರು. ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯದರ್ಶಿ ರಾಜನ್ ಮುಳಿಯಾರು ಸ್ವಾಗತಿಸಿ, ವಿ.ಹಿಂ.ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ ವಂದಿಸಿದರು.
501 ಮಂದಿ ಸದಸ್ಯರ ಪ್ರತಿಭಟನಾ ಸಮಿತಿ ರಚಿಸಲಾಯಿತು. ಗೌರವ ಮಾರ್ಗದರ್ಶಕರಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು, ಶ್ರೀ ವಿವಿಕ್ತಾನಂದ ಸರಸ್ವತೀ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬ್ರಹ್ಮಶ್ರೀ ರವೀಶ ತಂತ್ರಿ, ಕಾರ್ಯಾಧ್ಯಕ್ಷರಾಗಿ ಎಸ್.ಪಿ. ಶಾಜಿ, ಕಾರ್ಯದರ್ಶಿಯಾಗಿ ರಾಜನ್ ಮುಳಿಯಾರ್, ಕೋಶಾಧಿಕಾರಿಯಾಗಿ ಶಿವಶಂಕರ ನೆಕ್ರಾಜೆ, ಸಮನ್ವಯ ಸಮಿತಿ ಸಂಚಾಲಕರಾಗಿ ಗಣೇಶ್ ಮಾವಿನಕಟ್ಟೆ ಆಯ್ಕೆಯಾದರು.