ಊರಾಳುಂಗಲ್ ಚೆಯರ್‌ಮೆನ್ ರಮೇಶನ್ ಪಾಲೇರಿ ನಿಧನ

ಕಲ್ಲಿಕೋಟೆ: ಊರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ ಆಪರೇಟಿವ್ ಸೊಸೈಟಿ ಯ ಚೆಯರ್‌ಮೆನ್  ವಡಗರ ನಿವಾಸಿ ರಮೇಶನ್ ಪಾಲೇರಿ (66) ಇಂದು ಬೆಳಿಗ್ಗೆ ಕೊಯಂಬತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಅದು ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನಹೊಂದಿದರು.

ಕಾಸರಗೋಡು ಜಿಲ್ಲೆಯ ತಲಪಾಡಿಯಿಂದ ಆರಂಭಗೊಂಡು ಚೆಂಗಳ ತನಕದ 16೦೦ ಕೋಟಿ ರೂ.ಗಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಗುತ್ತಿಗೆ ವಹಿಸಿಕೊಂಡು ಅದನ್ನು ಈಗಾಗಲೇ ಯಶಸ್ವಿಯಾಗಿ ಪೂರ್ತೀಕರಿಸಿದ ಸಂಸ್ಥೆಯಾಗಿದೆ ಊರಾಳುಂಗಲ್ ಲೇಬರ್ ಸೊಸೈಟಿ.  ಈ ಸಂಸ್ಥೆಯಲ್ಲಿ ರಮೇಶನ್ ಪಾಲೇರಿ ಕಳೆದ 31 ವರ್ಷಗಳಿಂದ  ಸೇವೆ ಸಲ್ಲಿಸಿ ಏಷ್ಯಾದಲ್ಲೇ  ಅತೀ ದೊಡ್ಡ ಸಹಕಾರಿ ಸಂಸ್ಥೆಯಾಗಿಸುವಲ್ಲಿ  ಪ್ರಧಾನ ಪಾತ್ರ ವಹಿಸಿದ್ದರು. ಹಲವು ಪುರಸ್ಕಾರಗಳು ಇವರಿಗೆ ಲಭಿಸಿದೆ. ಇವರ ಮೃತದೇಹವನ್ನು ಇಂದು ಅಪರಾಹ್ನ ತೊಂಡಯಾಡ್ ಊರಾಳುಂಲ್ ಲೇಬರ್ ಪಾರ್ಕ್‌ನಲ್ಲಿ ಅಂತಿಮದ ರ್ಶನಕ್ಕಿರಿಸಿ ನಂತರ  ವಡಗರೆಗೆ ಸಾಗಿಸಿ ಅಂತ್ಯಕ್ರಿಯೆ ನಡೆಸಲಾಗುವುದು.

You cannot copy contents of this page