ಕೊಡ್ಯಮ್ಮೆ ಜಮಾಯತ್ ಮಸೀದಿಯಲ್ಲಿ ಉರೂಸ್ 21ರಿಂದ

ಕುಂಬಳೆ: ಕೊಡ್ಯಮ್ಮೆ ಜಮಾಯತ್ ಮಸೀದಿಯಲ್ಲಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್‌ರ ಹೆಸರಲ್ಲಿ ನಡೆಯುತ್ತಿರುವ ವಾರ್ಷಿಕ ಉರೂಸ್ ಹಾಗೂ ಧಾರ್ಮಿಕಪ್ರವಚನ ಈ ತಿಂಗಳ 21ರಿಂದ 28ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯ ಲಿದೆಯೆಂದು ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ 1.30ಕ್ಕೆ ಮಖಾಂ ಸಿಯಾರತ್‌ಗೆ ಮಹಮೂದ್ ಸಅದಿ ನೇತೃತ್ವ ನೀಡುವರು. ಬಳಿಕ ಜಮಾಯತ್ ಅಧ್ಯಕ್ಷ ಎಂ.ಎಂ.ಕೆ. ಮೊಯ್ದು ಹಾಜಿ ಧ್ವಜಾರೋಹಣಗೈಯ್ಯುವರು. 21ರಂದು ರಾತ್ರಿ 8 ಗಂಟೆಗೆ ಪಾಣಕ್ಕಾಡ್ ಹಮೀದಲಿ ಶಿಹಾಬ್ ತಂಙಳ್ ಉದ್ಘಾಟಿಸುವರು. ಎಂ.ಎಂ.ಕೆ. ಮೊಯ್ದು ಹಾಜಿ ಅಧ್ಯಕ್ಷತೆ ವಹಿಸುವರು. ಶೌಕತ್ ಅಲಿ ವೆಳ್ಳಮುಂಡ ಪ್ರಧಾನ ಭಾಷಣ ಮಾಡುವರು.ಮುಹಮ್ಮದ್ ಸಲೀಂ ಅಸ್‌ಹನಿ ಪ್ರಾರ್ಥನೆ ನಡೆಸುವರು. ಜಮಾಯತ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಪೂಕಟ್ಟೆ ಉಪಸ್ಥಿತರಿರು ವರು.  ಜಲಾಲಿಯಾ ರಾತಿಬ್‌ಗೆ ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್, ಮಜ್ಲಿಸ್‌ಗೆ ಅಬ್ದುಲ್ ಲತೀಫ್ ಸಖಾಫಿ ನೇತೃತ್ವ ನೀಡುವರು. ಉಚಿತ ವೈದ್ಯಕೀಯ  ಶಿಬಿರ, ಮಹಲ್ ಸಂಗಮ, ಬುರ್ದಾ ಮಜ್ಲಿಸ್, ಪೂರ್ವ ವಿದ್ಯಾರ್ಥಿ ಸಂಗಮ ಎಂಬಿವು ನಡೆಯಲಿದೆ.  ಹಲವು ಗಣ್ಯರು ವಿವಿಧ ದಿನಗಳಲ್ಲಿ ಭಾಗವಹಿಸುವರು.  27ರಂದು ರಾತ್ರಿ 8.30ಕ್ಕೆ ಸಮಾರೋಪ  ಜರಗಲಿದ್ದು ಶಿಹಾಬುದ್ದೀನ್ ತಂಙಳ್ ಮುತ್ತನ್ನೂರು ಉದ್ಘಾಟಿಸುವರು. ಅಬ್ದುಲ್ ಮಜೀದ್ ಫೈಸಿ ಅಧ್ಯಕ್ಷತೆ ವಹಿಸುವರು. ಶೆಫಿಕ್ ಬದರಿ ಅಲ್ ಬಾಖವಿ ಪ್ರಧಾನ ಭಾಷಣ ಮಾಡುವರು. ಹಾದಿ ತಂಙಳ್ ಮೊಗ್ರಾಲ್  ಪ್ರಾರ್ಥನೆ ನಡೆಸುವರು. 28ರಂದು ಬೆಳಿಗ್ಗೆ 11 ಗಂಟೆಗೆ ಮೌಲಿದ್ ಮಜ್ಲಿಸ್‌ಗೆ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ನೇತೃತ್ವ ನೀಡು ವರು. ಬಳಿಕ ಅನ್ನದಾನ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಹಮೂದ್ ಸಅದಿ, ಮುಹಮ್ಮದ್ ಕುಂಞಿ ಹಾಜಿ, ಕೆ.ಕೆ. ಅಬ್ಬಾಸ್ ಹಾಜಿ,ಕೆ.ಬಿ. ಯೂಸಫ್, ಅಬ್ಬಾಸ್ ಮಾಸ್ಟರ್, ಕರೀಂ ಮಾಸ್ಟರ್, ಇಬ್ರಾಹಿಂ ಉಕ್ಕಿಣಿ ಪಳ್ಳತ್ತಿಮಾರ್ ಭಾಗವಹಿಸಿದರು.

RELATED NEWS

You cannot copy contents of this page