ಕೊಚ್ಚಿ: ಐಟಿ ಕಂಪೆನಿ ಆರಂಭಿಸ ಲಿರುವ ಚರ್ಚೆಗಳ ಮಧ್ಯೆ ಕೊಚ್ಚಿಗೆ ತಲುಪಿದ ಯುಎಸ್ ಪ್ರಜೆಯನ್ನು ಹೋಟೆಲ್ ಕೊಠಡಿಯಲ್ಲಿ ಬಂಧನ ಗೊಳಿಸಿ ಹಲ್ಲೆ ನಡೆಸಿ ಹಣವನ್ನು ಅಪಹರಿಸಿದ ಇಬ್ಬರು ಯುವಕರು ಸೆರೆಯಾಗಿದ್ದಾರೆ. ಮುಳಂದುರುತ್ತಿ ನಿವಾಸಿ ಆದರ್ಶ್, ಪಳ್ಳುರುತ್ತಿ ನಿವಾಸಿ ಆಕಾಶ್ ಎಂಬಿವರನ್ನು ಎರ್ನಾಕುಳಂ ಸೆಂಟ್ರಲ್ ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದಿದ್ದಾರೆ. ಹಲವಾರು ಕ್ರಿಮಿನಲ್ ಪ್ರಕರಣ ಗಳಲ್ಲಿ ಇವರು ಆರೋಪಿಯಾಗಿದ್ದಾ ರೆಂದು ಪೊಲೀಸರು ತಿಳಿಸಿದ್ದಾರೆ. ಯುಎಸ್ ಪ್ರಜೆ ಹಾಗೂ ನ್ಯೂಯೋರ್ಕ್ನಲ್ಲಿ ಐಟಿ ಪ್ರೊಫೆಶನಲ್ ಆಗಿರುವ ಒಡಿಶ್ಶಾ ನಿವಾಸಿ ಇನ್ಫೋ ಪಾರ್ಕ್ನಲ್ಲಿ ಐಟಿ ಕಂಪೆನಿ ಆರಂಭಿಸುವುದಕ್ಕೆ ಸಂಬಂಧಿಸಿ ಚರ್ಚೆಗಳ ಮಧ್ಯೆ ಕಳೆದ ಶುಕ್ರವಾರ ಕೊಚ್ಚಿಗೆ ತಲುಪಿದ್ದರು. ಮರೈನ್ಡ್ರೈವ್ನ ಷಣ್ಮುಖಂ ರಸ್ತೆಯಲ್ಲಿರುವ ಹೋಟೆಲ್ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಶನಿವಾರ ಮದ್ಯ ಖರೀದಿಗೆಂದು ಹೊರ ಬಂದಿದ್ದರು. ಆದರೆ ಅಂದು ಮತಎಣಿಕೆ ದಿನವಾದ ಕಾರಣ ಡ್ರೈಡೇ ಆಗಿತ್ತು.
ಈ ವೇಳೆ ಮರೈನ್ಡ್ರೈವ್ ಪರಿಸರದಲ್ಲಿ ಕಂಡು ಬಂದ ಆದರ್ಶ್ನಲ್ಲಿ ಮದ್ಯ ಲಭಿಸಲು ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದ್ದರು. ಬಳಿಕ ಆತ ಮದ್ಯ ಸಂಗ್ರಹಿಸಿ ಯುಎಸ್ ಪ್ರಜೆಗೆ ನೀಡಿದ್ದನು. ಬಳಿಕ ಗೆಳೆತನ ನಟಿಸಿ ಹೋಟೆಲ್ ಕೊಠಡಿಗೆ ತೆರಳಿದ್ದು ಅಲ್ಲಿ ಇವರಿಬ್ಬರು ಮದ್ಯ ಸೇವಿಸಿ ಮಲಗಿದ್ದರು. ಆದಿತ್ಯವಾರ ಬೆಳಿಗ್ಗೆ ಕಲ್ಲಿಕೋಟೆಗೆ ಹೋಗಲಿರುವುದರಿಂದಾಗಿ ಯುಎಸ್ ಪ್ರಜೆ ಆದರ್ಶ್ನನ್ನು ನಿದ್ದೆಯಿಂದ ಎಬ್ಬಿಸಿದ್ದರು. ಇದರ ಬೆನ್ನಲ್ಲೇ ಆದರ್ಶ್ನ ಗೆಳೆಯನಾದ ಆಕಾಶ್ನನ್ನು ಅಲ್ಲಿಗೆ ಕರೆಸಿಕೊಂಡಿದ್ದು, ಬಾಗಿಲು ಬಡಿಯುವ ಶಬ್ದ ಕೇಳಿ ತೆರೆದಾಗ ವ್ಯಕ್ತಿ ತನ್ನಗೆ ಹಲ್ಲೆಗೈದಿರುವುದಾಗಿ ಯುಎಸ್ ಪ್ರಜೆ ತಿಳಿಸಿದ್ದಾರೆ. ಬಳಿಕ ಇವರಿಬ್ಬರೂ ಸೇರಿ ತನ್ನನ್ನು ಕೂಡಿಹಾಕಿ ಹಲ್ಲೆಗೈದು ಬೆದರಿಸಿರುವು ದಾಗಿಯೂ ಇವರು ದೂರಿದ್ದಾರೆ. ತನ್ನ ಖಾತೆಯಲ್ಲಿದ್ದ 75,೦೦೦ ರೂ. ಅವರು ಅಪಹರಿಸಿದ್ದು, ಅಲ್ಲದೆ 5೦೦ ಯುಎಸ್ ಡಾಲರ್, ಚಿನ್ನದ ಉಂಗುರ ಹಾಗೂ ಎಟಿಎಂ ಕಾರ್ಡ್ ಅಪಹರಿಸಿರುವುದಾಗಿಯೂ ತಿಳಿಸಿ ದ್ದಾರೆ. ಒಟ್ಟು 3,10,290 ರೂ. ನಷ್ಟ ವಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುಎಸ್ ಪ್ರಜೆ ತಿಳಿಸಿದ್ದಾರೆ.







