ವಿ.ಹಿಂ.ಪ. ಬದಿಯಡ್ಕ ಪ್ರಖಂಡ ಗೋಪೂಜೆ 20ರಂದು: ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ:- ವಿಶ್ವ ಹಿಂದು ಪರಿಷತ್ ಬದಿಯಡ್ಕ ಪ್ರಖಂಡ ವತಿಯಿಂದ ಅಕ್ಟೋಬರ್ 20 ರಂದು ನಡೆಯುವ ಗೋ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗಣೇಶ ಮಂದಿರದಲ್ಲಿ ಪ್ರಖಂಡ ಅಧ್ಯಕ್ಷ ಸುನೀಲ್ ಕಿನ್ನಿಮಾಣಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಹರಿಪ್ರಸಾದ್ ರೈ ಪುತ್ರಕಳ ಪತ್ರಿಕೆ ಬಿಡುಗಡೆ ಗೊಳಿಸಿದರು. ಉತ್ಸವ ಸಮಿತಿ ಉಪಾಧ್ಯಕ್ಷ ತನಿಯಪ್ಪ ಬದಿಯಡ್ಕ, ನಗರಾಧ್ಯಕ್ಷ ಶರತ್ ಶೆಟ್ಟಿ, ಪಂಚಾಯತ್ ಸಮಿತಿ ಅಧ್ಯಕ್ಷ ನಾರಾಯಣ.ಪಿ ಪೆರಡಾಲ, ಉಪಾಧ್ಯಕ್ಷ ಇಂದುಶೇಖರ ವಾಂತಿಚಾಲ್, ಹರಿರಾಮ, ಶಿವಪ್ರಸಾದ್, ಭಜರಂಗದಳ ಬದಿಯಡ್ಕ ಪ್ರಖಂಡ ಸಂಚಾಲಕ ಧನರಾಜ್, ಆರ್ ಎಸ್ ಎಸ್ ಬದಿಯಡ್ಕ ಮ0ಡಲ ಕಾರ್ಯವಾಹ ವಿಜಯ ಕಿನ್ನಿಮಾಣಿ, ಸ್ವರಾಜ್ ಬದಿಯಡ್ಕ, ಮ0ಡಲ ಸಹಕಾರ್ಯವಾಹ, ರಾಜೇಶ್ ವಲಮಳೆ , ಬದಿಯಡ್ಕ ಖಂಡ್ ಸಹಕಾರ್ಯವಾಹ ಚಂದ್ರಹಾಸ ಉಪಸ್ಥಿತರಿದ್ದರು. ಉತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್ ಬದಿಯಡ್ಕ ಸ್ವಾಗತಿಸಿ, ಕೋಶಾಧಿಕಾರಿ ಗುರುಪ್ರಸಾದ್ ರೈ ವಂದಿಸಿದರು

RELATED NEWS

You cannot copy contents of this page