ಬದಿಯಡ್ಕ: ಪಂಚಾಯತ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕೆಂದು ಪಂಚಾಯತ್ ಅಧ್ಯಕ್ಷ ಶಂಕರ ಡಿ. ಆಗ್ರಹಿಸಿದ್ದಾರೆ. ಜಿಲ್ಲಾ ಅಸಿಸ್ಟೆಂಟ್ ಡೈರೆಕ್ಟರ್, ತಿರುವನಂತಪುರ ಪ್ರಿನ್ಸಿಪಲ್ ಡೈರೆಕ್ಟರ್ ಎಂಬಿವರಿಗೆ ನೀಡಿದ ಮನವಿಯಲ್ಲಿ ಇವರು ಈ ಆಗ್ರಹ ಮುಂದಿಟ್ಟಿದ್ದಾರೆ. ಅಕೌಂಟೆಂಟ್, ಸೀನಿಯರ್ ಕ್ಲರ್ಕ್, ಯುಡಿ ಕ್ಲರ್ಕ್, ಅಸಿಸ್ಟೆಂಟ್ ಇಂಜಿನಿ ಯರ್, ಓವರ್‌ಸಿಯರ್ (2) ಎಂಬಿವು ಖಾಲಿ ಇದ್ದು, ಇದರಿಂದಾಗಿ ಪಂಚಾ ಯತ್‌ಗೆ ತಲುಪುವ ಜನರಿಗೆ ಸಮಸ್ಯೆ ಯಾಗುತ್ತಿದೆ ಎಂದು ಅಧ್ಯಕ್ಷ ತಿಳಿಸಿದ್ದಾರೆ. ಮನವಿ ನೀಡುವ ವೇಳೆ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಸದಸ್ಯ ಬಾಲಕೃಷ್ಣ ಶೆಟ್ಟಿ, ಬ್ಲೋಕ್ ಪಂ. ಸದಸ್ಯ ಮಹೇಶ್ ವಳಕುಂಜ ಭಾಗವಹಿಸಿದರು.







