ಅವಳಿ ಸಿಹಿ ನೀಡಿ ವಳಪ್ಪಿಲ ಕಮ್ಯೂನಿಕೇಶನ್ಸ್‌ಗೆ ರಾಷ್ಟ್ರೀಯ ಪುರಸ್ಕಾರ

ಕಣ್ಣೂರು: ಮಾಧ್ಯಮರಂಗದ ರಾಷ್ಟ್ರೀಯ ಪುರಸ್ಕಾರಗಳಾದ ಇ.ಫಾರ್ ಎಂ. ಮೀಡಿಯಾ ಏಸ್‌ಏಸ್ ಪ್ರಶಸ್ತಿಯಲ್ಲಿ ಅಭಿಮಾನಕರವಾದ ಅವಳಿ ಸಾಧನೆಯನ್ನು ವಳಪ್ಪಿಲ ಕಮ್ಯೂನಿಕೇ ಶನ್ಸ್ ಮಾಡಿದೆ.  ಇಂಡಿಪೆಂಡೆಂಟ್ ಏಜೆನ್ಸಿ ಆಫ್ ದಿ ಇಯರ್ ಪುರಸ್ಕಾರ ವಳಪ್ಪಿಲ ಕಮ್ಯೂನಿಕೇಷನ್ಸ್‌ಗೂ, ಇಂಡಿಪೆಂಡೆಂಟ್ ಏಜೆನ್ಸಿ ಹೆಡ್ ಆಫ್ ದಿ ಇಯರ್ ಪುರಸ್ಕಾರ ಮೆನೇಜಿಂಗ್ ಡೈರೆಕ್ಟರ್ ಆದ ಜೇಮ್ಸ್ ವಳಪ್ಪಿಲ್‌ಗೂ ಲಭಿಸಿದೆ. ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ವಳಪ್ಪಿಲ ಕಮ್ಯೂನಿಕೇಶನ್ಸ್ ಮೆನೇಜಿಂಗ್ ಡೈರೆಕ್ಟರ್‌ಗಳಾದ ಜೇಮ್ಸ್ ವಳಪ್ಪಿಲ,  ಜೋನ್ಸ್ ವಳಪ್ಪಿಲ, ನಿರ್ದೇಶಕ ಲಿಯೋ ವಳಪ್ಪಿಲ ಎಂಬಿವರು ಜಂಟಿಯಾಗಿ ಪುರಸ್ಕಾರ ಸ್ವೀಕರಿಸಿದರು. ಪ್ರಶಸ್ತಿ ಸಮಿತಿ ಅಧ್ಯಕ್ಷ ಹಾಗೂ ಎಕ್ಸ್‌ಚೇಂಜ್ 4 ಮೀಡಿಯ ಕೋ ಫೌಂಡರ್ ಆದ ನವಲ್ ಅಹುಜ, ಬಿಡಬ್ಲ್ಯು ಬಿಸಿನೆಸ್ ವರ್ಲ್ಡ್ ಚೆಯರ್‌ಮೆನ್ ಹಾಗೂ ಎಡಿಟರ್ ಇನ್ ಚೀಫ್ ಆದ ಡಾ. ಅನುರಾಗ್ ಬತ್ರ, ಡ್ಯೂರೋಸೆಲ್ ಇಂಡಿಯ ಜನರಲ್ ಮೆನೇಜರ್ ಸುನಿಲ್ ಗಾಡ್ಗಿಲ್, ಆಪ್‌ಟ್ರೋವ್ ಅಸೋಸಿಯೇಟ ನಿರ್ದೇಶಕ ಆಕಾಕ್ಷ ತಿವಾರಿ ಮಾತನಾಡಿದರು. ಡೆಂಟ್ಸು, ಮೈಂಡ್ ಶೇರ್, ಎಫ್‌ಸಿಬಿ, ಮ್ಯಾಡಿಸನ್, ಡಬ್ಲ್ಯುಪಿಪಿ, ಹವಾಸ್ ಮೊದಲಾದ ರಾಷ್ಟ್ರೀಯ ಮಟ್ಟದಲ್ಲಿನ ಅನೇಕ ಖ್ಯಾತ ಏಜೆನ್ಸಿಗಳು ವಿವಿಧ ಕೆಟಗರಿಗಳಲ್ಲಿ ಪ್ರಶಸ್ತಿಗೆ ಪಾತ್ರವಾಗಿವೆ.

ಮೀಡಿಯಾ ಸ್ಟೆಟಾಜಿಕಲ್, ಪ್ಲಾನಿಂಗ್, ಬೈಯಿಂಗ್, ಕ್ಲೈಂಟ್‌ಗಳ ಸಂತೃಪ್ತಿ ಮೊದಲಾದ ಘಟಕಗಳಲ್ಲಿ ವಳಪ್ಪಿಲ ಕಮ್ಯೂನಿಕೇಶನ್ಸ್ ಕಳೆದ ವರ್ಷ ಕೈಗೊಂಡ ಸಾಧನೆಯ ಆಧಾರದಲ್ಲಿ ಪ್ರಶಸ್ತಿಗೆ ಅರ್ಹವಾಗಿದೆ. ರಾಜ್ಯದ ಜಾಹೀರಾತು ರಂಗದಲ್ಲಿ, ಮಾಧ್ಯಮಗಳಿಗೆ ಹಾಗೂ ಗ್ರಾಹಕರಿಗೆ ಲಭಿಸಿದ ಅಂಗೀಕಾರವಾಗಿ ಈ ಪುರಸ್ಕಾರವನ್ನು ಕಾಣುತ್ತಿರುವುದಾಗಿ ಪ್ರಶಸ್ತಿ ಸ್ವೀಕರಿಸುತ್ತಾ ಜೇಮ್ಸ್ ವಳಪ್ಪಿಲ್ ನುಡಿದರು. ಕೇರಳದ ಜಾಹೀರಾತುರಂಗದಲ್ಲಿ ೪೦ ವರ್ಷಕ್ಕೂ ಹೆಚ್ಚು ಪರಂಪರೆಯಿರುವ ವಳಪ್ಪಿಲ ಕಮ್ಯೂನಿಕೇಶನ್ಸ್ ರಾಜ್ಯದಾದ್ಯಂತ ೯ ಬ್ರಾಂಚ್‌ಗಳನ್ನು ಹೊಂದಿದೆ. ಕ್ರಿಯೇಟಿವ್ ಅಡ್ವರ್‌ಟೈಸಿಂಗ್, ಬ್ರಾಂಡಿಂಗ್, ಮೀಡಿಯಾ ಬೈಯಿಂಗ್, ಡಿಜಿಟಲ್ ಮಾರ್ಕೆಟಿಂಗ್, ಔಟ್‌ಡೋರ್, ಪ್ರಿಂಟ್ ಆಂಡ್ ಪ್ರೊಡಕ್ಷನ್, ಇವೆಂಟ್ಸ್ ಆಂಡ್ ಪಿ.ಆರ್. ಮೊದಲಾದ ಎಲ್ಲಾ ವಲಯಗಳಲ್ಲೂ ಮುಂಚೂಣಿಯಲ್ಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

RELATED NEWS

You cannot copy contents of this page