ವಂದೇಭಾರತ್ ಸ್ಲೀಪರ್ ರೈಲು ಈ ತಿಂಗಳ ಕೊನೆಯಲ್ಲಿ ಸಂಚಾರ ಆರಂಭ

ಚೆನ್ನೈ: ಪ್ರಯಾಣಿಕರು ಬಹಳ ಕಾಲದಿಂದ ಕಾಯುತ್ತಿದ್ದ ವಂದೇ ಭಾರತ್ ಸ್ಲೀಪರ್ ಗಾಡಿಯ ಉದ್ಘಾಟನೆ ಈ ತಿಂಗಳ ಕೊನೆಯಲ್ಲಿ ಉಂಟಾಗಬಹುದೆಂದು ರೈಲ್ವೇ ಮೂಲಗಳು ತಿಳಿಸಿವೆ. ಮೊದಲ ಸಂಚಾರ ದೆಹಲಿ ಹಾಗೂ ಪಾಟ್ನಾ ಮಧ್ಯೆ  ಇರಲಿದೆ. ಎರಡು ನಗರಗಳನ್ನು ಜೋಡಿಸುವ ರಾತ್ರಿ ಕಾಲ ಸಂಚಾರ ನಡೆಯಲಿದೆ. ತೇಜಸ್, ರಾಜಧಾನಿ ರೈಲುಗಾಡಿಗಳಿಗೆ ಸಮಾನವಾದ ಆಧುನಿಕ ಸೌಕರ್ಯಗಳೊಂದಿಗೆ ವಂದೇ ಭಾರತ್ ಸ್ಲೀಪರ್ ಸಂಚಾರ ನಡೆಸಲಿದೆ. ಇದಕ್ಕಿರುವ ಕೋಚ್‌ಗಳು ಬೆಂಗಳೂರಿನ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ (ಬೆಮಲ್) ನಿರ್ಮಿಸಿದೆ. 16 ಕೋಚ್‌ಗಳಿರುವ ಎರಡು ರೈಲುಗಾಡಿಗಳನ್ನು ರೈಲ್ವೇಗೆ ಬೆಮಲ್ ಹಸ್ತಾಂತರಿಸಿದೆ.

ಶುಕ್ರವಾರದಿಂದ ದೆಹಲಿ ಪಾಟ್ನಾ ರೂಟ್‌ನಲ್ಲಿ ಪರಿಕ್ಷಾರ್ಥ ಸಂಚಾರ ನಡೆಯಲಿದೆ. ಬಳಿಕ ರೈಲ್ವೇ ಸೇಫ್ಟಿ ಕಮಿಷನರ್‌ರ ಉಪಸ್ಥಿತಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಯಲಿದೆ. ಇದು ಯಶಸ್ವಿಯಾದರೆ ಡಿಸೆಂಬರ್ ಕೊನೆಯಲ್ಲಿ ಸಂಚಾರ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 16 ಕೋಚ್‌ಗಳಲ್ಲಾಗಿ 827 ಮಂದಿಗೆ ಸಂಚರಿಸಬಹುದಾಗಿದೆ. 11 ತರ್ಡ್ ಎಸಿ ಕೋಚ್‌ಗಳಲ್ಲಿ 611 ಬರ್ತ್‌ಗಳು, 4 ಸೆಕೆಂಡ್ ಎಸಿ ಕೋಚ್‌ಗಳಲ್ಲಿ 188 ಬರ್ತ್‌ಗಳು, 1 ಫಸ್ಟ್ ಎಸಿ ಕೋಚ್‌ನಲ್ಲಿ 24 ಬರ್ತ್‌ಗಳು ಇರಲಿದೆ. ವಾರದಲ್ಲಿ ಆರು ದಿವಸ ಸಂಚಾರ ನಡೆಸಲಿದೆ.

RELATED NEWS

You cannot copy contents of this page