ಕೈಕಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ: ಮೀನಿನ ಟೆಂಪೋ ಢಿಕ್ಕಿ ಹೊಡೆದು ಮೂವರಿಗೆ ಗಂಭೀರ ಗಾಯ

ಉಪ್ಪಳ: ಇಲ್ಲಿನ ಕೈಕಂಬ ರಾಷ್ಟ್ರೀ ಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ೪ ಗಂಟೆಗೆ ಸಂಭವಿಸಿದ ವಾಹನ ಅಪ ಘಾತದಲ್ಲಿ ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೀನುಸಾಗಾಟ ಟೆಂಪೋವೊಂದರ ಚಾಲಕ ತಮಿಳು ನಾಡಿನ ನಾಗರ್‌ಕೋವಿಲ್ ಎಡಲ ಕ್ಕುಡಿ ಕಪೆ ರೋಡ್‌ನ ಮೊಹಮ್ಮದ್ ರಿಯಾಸ್ (35), ಕ್ಲೀನರ್ ಆಲಪ್ಪುಳ ಪುನ್ನಪ್ರ ಮನ್ನಾಪರಬು ನಿವಾಸಿ ಎ. ರಾಜ (72) ಸಹಿತ ಮೂವರು ಗಾಯಗೊಂಡಿ ರುವುದಾಗಿ ತಿಳಿದು ಬಂದಿದೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕಾಸರಗೋಡು ಭಾಗದಿಂದ ಮಂಗಳೂರಿನತ್ತ ತೆರಳುತ್ತಿದ್ದ ಮೀನು ಸಾಗಾಟ ಟೆಂಪೋದ ಟಯರ್ ಪಂಕ್ಚರ್ ಆಗಿತ್ತು. ಇದರಿಂದ ಆ ಟೆಂಪೋವನ್ನು ನಿಲ್ಲಿಸಿ ಚಾಲಕ ರಾಷ್ಟ್ರೀಯ ಹೆದ್ದಾರಿ ಗಿಳಿದು ಹಿಂದಿನಿಂದ ಬರುತ್ತಿದ್ದ ಬೇರೊಂದು ಮೀನಿನ ಟೆಂಪೋಕ್ಕೆ  ಕೈ ಕಾಣಿಸಿ ನಿಲ್ಲಿಸಿದರು. ಇದರಿಂದ ಈ ಎರಡು ಟೆಂಪೋದಲ್ಲಿದ್ದ ಮೂರು ಮಂದಿ ನಿಂತು ಮಾತನಾಡುತ್ತಿ ದ್ದಾಗ ಹಿಂದಿನಿಂದ ಬಂದ ಬೇರೊಂದು ಟೆಂಪೋ ಆ ಮೂವರಿಗೆ ಢಿಕ್ಕಿ ಹೊಡೆದು ಬೀಳಿಸಿದ ಬಳಿಕ ಎದುರಿಗಿದ್ದ ಟೆಂಪೋಕ್ಕೆ ಬಡಿದು ನಿಂತಿದೆ. ಇದರಿಂದ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಮೂರು ಮಂದಿಯನ್ನು ಆ ರಸ್ತೆಯಲ್ಲಿ ಬಂದ ಕಾರು ಪ್ರಯಾಣಿಕರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮೂವರನ್ನೂ ಆಂಬುಲೆನ್ಸ್‌ನಲ್ಲಿ ಮಂಗಳೂರಿನ ಆಸ್ಪತ್ರೆಗೆ ತಲುಪಿಸಲಾಯಿತು. ಘಟನೆ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಹಾಗೂ ಉಪ್ಪಳ ಅಗ್ನಿಶಾಮಕ ದಳ ತಲುಪಿದ್ದರು.

You cannot copy contents of this page