ಕುಂಬಳೆ: ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಸಾವಿಗೆ ಕಾರಣ ಆಂತರಿಕ ಅವಯವದಲ್ಲಿ ಉಂಟಾದ ರಕ್ತಸ್ರಾವವಾಗಿದೆಯೆಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಆರಿಕ್ಕಾಡಿ ಪಾರೆಸ್ಥಾನದ ಕೃಷ್ಣ ಬೆಳ್ಚಪ್ಪಾಡರ ಪುತ್ರ ಎಂ. ಹರೀಶ್ ಕುಮಾರ್ (37) ಮೊನ್ನೆ ರಾತ್ರಿ 11 ಗಂಟೆಗೆ ಪೆರುವಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದರು. ಇವರು ಸಂಚರಿಸಿದ ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಅಪಘಾತವುಂಟಾಗಿತ್ತು. ಇದರಲ್ಲಿ ಗಾಯಗೊಂಡ ಹರೀಶ್ ಕುಮಾ ರ್‌ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ವೇಳೆ ಇವರು ಮೃತಪಟ್ಟಿದ್ದರು.
ಇದೇ ವೇಳೆ ಸರಿಯಾದ ಚಿಕಿತ್ಸೆ ನೀಡದಿರುವುದೇ ಹರೀಶ್ ಕುಮಾರ್‌ರ ಸಾವಿಗೆ ಕಾರಣವೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್, ಎಸ್ ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ತಲುಪಿ ಪ್ರತಿಭಟನಾ ಕಾರರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಮಗ್ರ ಮರಣೋತ್ತರ ಪರೀಕ್ಷೆ ಗಾಗಿ ಮೃತದೇಹವನ್ನು ಪರಿಯಾರಂ ಗೆ ಕೊಂಡೊ ಯ್ಯಲಾಗಿತ್ತು.
ಮರಣೋತ್ತರ ಪರೀಕ್ಷೆ ಬಳಿಕ ನಿನ್ನೆ ಸಂಜೆ 6 ಗಂಟೆ ವೇಳೆ ಮೃತದೇಹವನ್ನು ಮನೆಗೆ ತಲುಪಿಸಲಾಯಿತು. ಸಂಬಂಧಿಕರು, ಬಿಜೆಪಿ ನೇತಾರರು, ಕಾರ್ಯP ರ್ತರು, ನಾಗರಿಕರು ಸಹಿತ ಹಲವು ಮಂದಿ ತಲುಪಿ ಅಂತಿಮ ನಮನ ಸಲ್ಲಿಸಿದ ಬಳಿಕ ಮೃತದೇಹದ ಅಂತ್ಯಸಂಸ್ಕಾರ ಕುಂಟಂಗೇರಡ್ಕದ ಸ್ಮಶಾನದಲ್ಲಿ ನಡೆಸಲಾಯಿತು.







