ಕಾಸರಗೋಡು: ಜಿಲ್ಲೆಯಲ್ಲಿ ತೀವ್ರ ರೀತಿಯಲ್ಲಿ ಮಳೆ ಮುಂದುವರಿ ಯುತ್ತಿರುವ ಸನ್ನಿವೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುತ್ತಿರುವ ಪ್ರದೇಶಗಳಲ್ಲಿ ಗುಡ್ಡೆ ಕುಸಿತ ಭೀತಿ ಎದುರಾಗಿರುವ ರಸ್ತೆಗಳಲ್ಲಿ ಸಂಚಾರ ನಿಷೇಧ ಹೇರಲಾಗಿದೆ. ವೀರಮಲಕುನ್ನ್, ಬೇವಿಂಜೆ ಪ್ರದೇಶಗಳ ಮೂಲಕ ಪ್ಯಾಸೆಂಜರ್ ವಾಹನಗಳಿಗೆ ಸಂಚಾರ ಇನ್ನೊಂದು ಸೂಚನೆ ನೀಡುವವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ದೊಡ್ಡ ವಾಹನಗಳು, ಆಂಬುಲೆನ್ಸ್, ಫಯರ್ ಟ್ರಕ್ ಮೊದಲಾದ ತುರ್ತು ವಾಹನಗಳಿಗೆ ಮಾತ್ರವೇ ಈ ದಾರಿಯಾಗಿ ಸಂಚರಿಸಲು ಅನುಮತಿ ನೀಡುವುದಾಗಿ ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರದ ಅಧ್ಯಕ್ಷನಾಗಿರುವ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ತಿಳಿಸಿದ್ದಾರೆ.
