ಕಾಸರಗೋಡು: ಶಬರಿಮಲೆ ಕ್ಷೇತ್ರದ ಚಿನ್ನವನ್ನು ಕೊಳ್ಳೆಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಎನ್‌ಡಿಪಿ ಮುಖಂಡ ವೆಳ್ಳಾಪಳ್ಳಿ ನಟೇಶನ್ ನೀಡಿರುವ ಹೇಳಿಕೆ ಬ್ರಾಹ್ಮಣ ವಿರೋಧಿ ಯಾಗಿದೆ ಎಂದು ಕಾಸರಗೋಡು ಬ್ರಾಹ್ಮಣ ಮಹಾಸಭಾದ ಸಂಚಾಲಕ ಡಿ. ಜಯನಾರಾಯಣ ತಾಯನ್ನೂರು ತಿಳಿಸಿದ್ದಾರೆ. ಕ್ಷೇತ್ರದ ಚಿನ್ನವನ್ನು ನಂಬೂದಿರಿಯವರು ಮತ್ತು ಪೋತಿಯವರು ಕೊಳ್ಳೆ ಹೊಡೆ ಯುತ್ತಿದ್ದಾರೆ ಎಂಬ ವೆಳ್ಳಾಪಳ್ಳಿಯವರ ಹೇಳಿಕೆ ದ್ವೇಷದಿಂದ ಕೂಡಿರುವುದಾಗಿದೆ. ಅವರ ಹೇಳಿಕೆಯು ತನ್ನ ಸ್ವಾರ್ಥಕ್ಕಾಗಿ ಜಾತಿಗಳೊಳಗೆ ಹಗೆತನ ಮತ್ತು ಜಗಳ ಉಂಟುಮಾಡಲು ಪ್ರಚೋ ದನೆಯಾದಂತಿದೆ. ಅವರ ಹೇಳಿಕೆ ಅವಿವೇಕತನದ್ದಾಗಿದ್ದು, ಅತ್ಯಂತ ಬಾಲಿಷದಿಂದ ಕೂಡಿದೆ. ಇಡೀ ಬ್ರಾಹ್ಮಣ ಸಮಾಜದ ವಿರುದ್ಧ ಹೇಳಿಕೆ ನೀಡಿದ ಅವರ ಘನತೆ ಏನೆಂಬುದು ಸಮಾಜಕ್ಕೆ ಅರಿವಾಗಿದೆ. ಬ್ರಾಹ್ಮಣ ಸಮುದಾಯದ ಎಲ್ಲರನ್ನೂ ಹೀಯಾಳಿಸಿರುವುದನ್ನು ಸಹಿಸಲು ಸಾಧ್ಯವಿಲ್ಲವೆಂದೂ ಜಯನಾರಾಯಣ ತಾಯನ್ನೂರು ತಿಳಿಸಿದ್ದಾರೆ. ತಪ್ಪು ಮಾಡಿದ ಅಥವಾ ಚಿನ್ನ ಕೊಳ್ಳೆ ಹೊಡೆದ ವ್ಯಕ್ತಿಗಳು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಕಾಸರಗೋಡು ಬ್ರಾಹ್ಮಣ ಮಹಾಸಭಾದ ಅಭಿಪ್ರಾಯವಾಗಿದೆ. ಬ್ರಾಹ್ಮಣ ಸಮಾಜಕ್ಕೆ ವೋಟ್ ಬ್ಯಾಂಕ್ ಇಲ್ಲವೆಂದು ತಪ್ಪು ತಿಳುವಳಿಕೆಯಿಂದ ಇಡೀ ಸಮುದಾಯವನ್ನು ದೂಷಿಸುವುದು ಹಾಗೂ ಅಪಹಾಸ್ಯ ಮಾಡುವುದು ಖಂಡನೀಯವಾಗಿದೆ. ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿದ ವೆಳ್ಳಾಪಳ್ಳಿ ನಟೇಶನ್‌ರ ಮಾತುಗಳು ಖಂಡನೀಯವಾಗಿದೆ. ಈ ಮೂಲಕ ಅವರು ಬ್ರಹ್ಮಶ್ರೀ ನಾರಾಯಣಗುರುಗಳಿಗೂ ಅವಮಾನ ಮಾಡಿದ್ದಾರೆಂದು ಡಿ. ಜಯನಾರಾಯಣ ತಾಯನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







