ಕಾಸರಗೋಡು: ಜಿಲ್ಲೆಯ ಅಬಕಾರಿ ಕಚೇರಿಗಳಲ್ಲಿ ವಿಜಿಲೆನ್ಸ್ ತಪಾಸಣೆ ನಡೆಸಿದೆ. ರಾಜ್ಯದ 68 ಸರ್ಕಲ್ ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿದೆ. ಆಪರೇಶನ್ ಸೇವ್ ಸಿಪ್ ಎಂಬ ಹೆಸರಿನಲ್ಲಿ ನಡೆಸಿದ ತಪಾಸಣೆಯಲ್ಲಿ ಅಬಕಾರಿ ಅಧಿಕಾರಿಗಳ ಕೈಯಿಂದ ಹಾಗೂ ಕಚೇರಿ ಸಮೀಪದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಹಣ ಪತ್ತೆಯಾಗಿದೆ. ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯಲ್ಲಿ ನಡೆಸಿದ ತಪಾಸಣೆ ವೇಳೆ ಲೆಕ್ಕದಲ್ಲಿ ತೋರಿಸದ 6 ಸಾವಿರ ರೂ. ವಿಜಿಲೆನ್ಸ್ ಪತ್ತೆಹಚ್ಚಿದೆ.
