ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗೆ ಸಲಿಂಗರತಿ ಕಿರುಕುಳ: ವಾರ್ಡನ್ ಸೆರೆ

ಕಾಸರಗೋಡು: ಪ್ರಿಮೆಟ್ರಿಕ್ ಹಾಸ್ಟೆಲ್‌ನ ವಿದ್ಯಾರ್ಥಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಹಾಸ್ಟೆಲ್‌ನ ವಾರ್ಡನ್‌ನನ್ನು ಪೊಲೀಸರು ಬಂಧಿಸಿ ದ್ದಾರೆ. ಮಾಲೋಂ ಕಾರ‍್ಯೋಟ್‌ಚ್ಚಾಲ್‌ನ ರಾಜೇಶ್ ಬಂಧಿತನಾದ ಆರೋಪಿ. ವೆಳ್ಳರಿಕುಂಡ್ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಸತೀಶ್‌ರ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ.  ಪ್ರಿ ಮೆಟ್ರಿಕ್ ಶಾಲೆ ಹಾಸ್ಟೆಲ್ ಒಂದರಲ್ಲಿ  ವಾಸಿಸುತ್ತಿರುವ ವಿದ್ಯಾರ್ಥಿಯೋರ್ವ ನಿಗೆ ಓಣಂ ಹಬ್ಬದ ಮೊದಲು ಸಲಿಂಗ ರತಿ ಕಿರುಕುಳ ನೀಡಲಾಗಿದೆ ಎಂದೂ, ಓಣಂ ರಜೆ ಕಳೆದು ಆ ವಿದ್ಯಾರ್ಥಿ ಹಿಂ ತಿರುಗಿದ ನಂತರ ನಡೆದ ಆ ವಿದ್ಯಾರ್ಥಿ ನಡೆದ ವಿಷಯವನ್ನು ಪರಿಶಿಷ್ಟ ಪಂಗಡ ವಿಭಾಗದ ಕನ್ಸವೇಟರ್‌ರಲ್ಲಿ ತಿಳಿಸಿದ್ದನು. ಕನ್ಸವೇಟರ್ ಆ ಮಾಹಿತಿಯನ್ನು ನಂತರ ಪರಿಶಿಷ್ಟ ಪಂಗಡ ಅಧಿಕಾರಿಗೆ ನೀಡಿದ್ದರು. ಅದರಂತೆ ಚೈಲ್ಡ್‌ಲೈನ್ ಮೂಲಕ ನೀಡಲಾದ ದೂರಿನಂತೆ ಹಾಸ್ಟೆಲ್ ವಾರ್ಡನ್‌ನ ವಿರುದ್ಧ ಪ್ರಕರಣ ದಾಖಲಿಸಲಾಯಿತೆಂದು ವೆಳ್ಳರಿಕುಂಡ್ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿ ಪ್ರಸ್ತುತ ಹಾಸ್ಟೆಲ್‌ನ ದಿನವೇತನದ ಆಧಾರದಲ್ಲಿ ದುಡಿಯುವ ವ್ಯಕ್ತಿಯಾಗಿದ್ದಾನೆ. ಆರೋಪಿಯನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

You cannot copy contents of this page