ಉಪ್ಪಳ: ಮೂರು ವಾರಂಟ್ ಪ್ರಕರಣಗಳಲ್ಲಿ ಆರೋಪಿಯಾದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಸೋಂಕಾಲ್‌ನ ಮೊಹಮ್ಮದ್ ಫಾರೂಕ್ ಯಾನೆ ಚೀಲ ಫಾರೂಕ್ (25) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ಅಮಲು ಪದಾರ್ಥ ಕೈವಶವಿರಿಸಿಕೊಂಡ, ಕೊಲೆಯತ್ನ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈತನ ವಿರುದ್ಧ ವಾರಂಟ್ ಜ್ಯಾರಿಯಲ್ಲಿದೆ. ಈತ ನಿನ್ನೆ ಉಪ್ಪಳದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್, ಎಸ್‌ಐಗಳಾದ ಶಬರಿಕೃಷ್ಣ, ವೈಷ್ಣವ್, ಮಹಿಳಾ ಪೊಲೀಸ್ ವಂದನ ಎಂಬಿವರು ತಕ್ಷಣ ಅಲ್ಲಿಗೆ ತಲುಪಿ ಬಂಧಿಸಿದ್ದಾರೆ. ಅಮಲು ಪದಾರ್ಥ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ನ್ಯಾಯಾಲ ಯ ರಿಮಾಂಡ್ ವಿಧಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.






