ಕಾಸರಗೋಡು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿ ಯಾಗಿದ್ದು, ಕಳೆದ ಹನ್ನೊಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಉತ್ತರ ಪ್ರದೇಶದ ಲಕ್ನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಚೆಮ್ನಾಡ್ ಜಮಾಯತ್ ಶಾಲೆ ಬಳಿಯ ಅಬ್ದುಲ್ ಶಹಿಲ್ ಆರೋಪಿಯಾಗಿದ್ದಾನೆ. 2014ರಲ್ಲಿ ವಿದ್ಯಾನಗರ ಪೊಲೀಸರು ದಾಖಲಿಸಿ ಕೊಂಡಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಬ್ದುಲ್ ಶಹೀಲ್ನ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದರು. ಈ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(1)ರಲ್ಲಿ ಆರಂಭಗೊಂಡಿತ್ತು. ಆದರೆ ಆ ವೇಳೆ ಆರೋಪಿ ನ್ಯಾಯಾಲಯದಲ್ಲಿ ಹಾಜರಾಗದೆ ಗಲ್ಫ್ಗೆ ಹೋಗಿದ್ದನು. ಅದರಂತೆ ಆತನ ಪತ್ತೆಗಾಗಿ ಪೊಲೀಸರು ಮೊದಲು ಲುಕೌಟ್ ನೋಟೀಸು ಜ್ಯಾರಿಗೊಳಿಸಿದ್ದರು. ಮಾತ್ರವಲ್ಲ ನಂತರ ಆತನನ್ನು ತಲೆಮರೆಸಿಕೊಂ ಡಿರುವ ಆರೋಪಿಯನ್ನಾಗಿಸಿ ಆತನ ಬಂಧನಕ್ಕಾಗಿ ನ್ಯಾಯಾಲಯ ವಾರಂಟ್ನ್ನು ಜ್ಯಾರಿಗೊಳಿಸಿತ್ತು. ಈಮಧ್ಯೆ ಆರೋಪಿ ಗಲ್ಫ್ನಿಂದ ವಿಮಾನದ ಮೂಲಕ ಉತ್ತರ ಪ್ರದೇಶದ ಲಕ್ನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ಆ ಬಗ್ಗೆ ವಿಮಾನ ನಿಲ್ದಾಣದಿಂದ ಲಭಿಸಿದ ಮಾಹಿತಿಯಂತೆ ವಿದ್ಯಾನಗರ ಠಾಣೆಯ ಇನ್ಸ್ಪೆಕ್ಟರ್ ಕೆ.ಪಿ. ಶೈನ್ ನೇತೃತ್ವದಲ್ಲಿ ಎಸ್ಐ ಸಫ್ವಾನ್ ಮತ್ತು ಸಿಪಿಒ ಪ್ರಜಿತ್ ಕುಮಾರ್ರನ್ನೊಳ ಗೊಂಡ ಪೊಲೀಸರ ತಂಡ ಆರೋಪಿಯನ್ನು ಲಕ್ನೋ ವಿಮಾನ ನಿಲ್ದಾಣ ದಿಂದ ಬಂಧಿಸಿ ವಿದ್ಯಾನಗರ ಪೊಲೀಸ್ ಠಾಣೆಗೆ ತಲುಪಿದೆ. ಆರೋಪಿಯನ್ನು ಇಂದು ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಗುವು ದೆಂದು ಪೊಲೀಸರು ತಿಳಿಸಿದ್ದಾರೆ.







