ಉಪ್ಪಳ: ಬಂದ್ಯೋಡು-ಪೆರ್ಮುದೆ ರಸ್ತೆಯ ಡಬಲ್ಗೇಟ್ನ ಬಳಿ ಮರವೊಂದರಲ್ಲಿ ಕಣಜದ ಹುಳು ಎಂದು ಅಂದಾಜಿಸಲಾಗುತ್ತಿರುವ ಗೂಡು ಪತ್ತೆಯಾಗಿದ್ದು, ಇದು ಊರವರಲ್ಲಿ ಆತಂಕ ಉಂಟುಮಾಡಿದೆ. ಕಳೆದ ಒಂದು ತಿಂಗಳಿAದ ಇಲ್ಲಿನ ಮರದಲ್ಲಿ ಗೂಡು ಕಂಡುಬAದಿದ್ದು, ದಾಳಿ ಮಾಡುವ ಸಾಧ್ಯೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪರಿಸರದಿಂದ ಶಾಲೆ, ಅಂಗನವಾಡಿ ಮಕ್ಕಳ ಸಹಿತ ಹಲವಾರು ಮಂದಿ ನಡೆದು ಹೋಗುತ್ತಿದ್ದಾರೆ. ಅಲ್ಲದೆ ಈ ಪರಿಸರದಲ್ಲಿ ಮನೆ, ಅಂಗಡಿ ಕೂಡಾ ಇದ್ದು, ಆತಂಕಕ್ಕೆ ಕಾರಣವಾಗಿದೆ. ಇದನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.





