ಈ ಚುನಾವಣೆಯಲ್ಲಿ ಕೇರಳದ ಜನತೆ ಬಿಜೆಪಿಯನ್ನು ಎರಡೂ ಕೈ ಚಾಚಿ ಸ್ವೀಕರಿಸಲಿದ್ದಾರೆ-ಸಿ.ಕೆ. ಪದ್ಮನಾಭನ್

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕೇರಳದ ಜನರು ಬಿಜೆಪಿಯನ್ನು ಎರಡೂ ಕೈಗಳನ್ನು ಚಾಚಿ ಸ್ವೀಕರಿಸಲಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ತಿಳಿಸಿದ್ದಾರೆ.

ಬಿಜೆಪಿ ಕಾಸರಗೋಡು ನಗರಸಭೆಯ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರದ ಬಗ್ಗೆ ನಡೆಸಲಾಗುತ್ತಿರುವ ಅಪಪ್ರಚಾರಗಳಿಗೆ ಜನರು ಬೆಲೆ ಕಲ್ಪಿಸಲಾರರು. ಸರ್ವ ವಲಯದಲ್ಲೂ ಕೇರಳ ಒಂದನೇ ಸ್ಥಾನದಲ್ಲಿದೆಯೆಂಬ ರೀತಿಯ ವಾದಗಳು ಕೇವಲ ಕಪಟವಾಗಿದೆ. ದೇಶದ ಬಡತನ ರಾಜ್ಯವಾಗಿದ್ದ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಆ ರಾಜ್ಯಗಳಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜ್ಯಾರಿಗೊಳಿಸುವ ಮೂಲಕ ಈಗ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗಿವೆ ಎಂದು ಪದ್ಮನಾಭನ್ ಹೇಳಿದರು. ಬಿಜೆಪಿಯ ಕಾಸರಗೋಡು ವಿಶನ್-2030 ಪ್ರಣಾಳಿಕೆಯನ್ನು ಈ ಸಂದರ್ಭದಲ್ಲಿ ಅವರು ಬಿಡುಗಡೆಗೊಳಿಸಿದರು. ಬಿಜೆಪಿಯ ಕಾಸರಗೋಡು ನಗರಸಭೆಯ ಈಸ್ಟ್ ಏರಿಯಾ ಸಮಿತಿ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್, ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಉಪಾಧ್ಯಕ್ಷ ಪಿ. ರಮೇಶ್, ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, ನಗರಸಭೆಯ ಈಸ್ಟ್ ಏರಿಯಾ ಪ್ರಧಾನ ಕಾರ್ಯದರ್ಶಿ ದಯಾನಂದ ಪೂಜಾರಿ ಮೊದಲಾದವರು ಮಾತನಾಡಿದರು.

RELATED NEWS

You cannot copy contents of this page