ಮೂರುಬಾರಿ ತಲ್ಲಾಖ್ ನುಡಿದು ವಿವಾಹ ಸಂಬಂಧದಿಂದ ಹಿಂಜರಿತ; ಪತಿ ವಿರುದ್ಧ  ಕೇಸು

ಮುಳ್ಳೇರಿಯ:  ಹೆಚ್ಚುವರಿ ಚಿನ್ನಾಭರಣ ಚಿನ್ನಾಭರಣ ನೀಡದ ದ್ವೇಷದಿಂದ ಪತ್ನಿಗೆ ಮೂರುಬಾರಿ ತಲಾಖ್ ನುಡಿದು ವಿವಾಹ ಸಂಬಂ ಧದಿಂದ ಹಿಂಜರಿದ ಬಗ್ಗೆ ದೂರಲಾ ಗಿದೆ. ಇದರಂತೆ ಯುವತಿ ನೀಡಿದ ದೂರಿನ ಮೇರೆಗೆ ಆದೂರು ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ. ದೇಲಂಪಾಡಿಯ ಎಚ್. ರಾಶಿದ (22) ನೀಡಿದ ದೂರಿನಂತೆ  ಪತಿ ಕುಂಬ್ಡಾಜೆ ಬೆಳಿಂಜದ  ಬಾಡಿಗೆ ಮನೆಯಲ್ಲಿ ವಾಸಿಸುವ ಇಬ್ರಾಹಿಂ ಬಾದುಶ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಇಬ್ರಾಹಿಂ ಬಾದುಶ ಈಶ್ವರಮಂಗಲ ಕಾವು ನಿವಾಸಿಯಾಗಿದ್ದಾನೆ. 2018 ಮೇ 18ರಂದು  ಇಬ್ರಾಹಿಂ ಬಾದುಶ ಹಾಗೂ ರಾಶಿದರ ಮದುವೆ ನಡೆ ದಿತ್ತು. ಅನಂತರ ದಂಪತಿ ಕಾವುವಿನ ಮನೆಯಲ್ಲಿ ವಾಸಿಸುತ್ತಿದ್ದರು.

ಈ ವೇಳೆ ಮದುವೆ ಉಡುಗೊರೆಯಾಗಿ ನೀಡಿದ 8 ಪವನ್ ಚಿನ್ನದ ಹೊರತು ಹೆಚ್ಚುವರಿ ಚಿನ್ನ ನೀಡಬೇಕೆಂದು ಒತ್ತಾಯಿಸಿ ಪತಿ ಶಾರೀರಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆಂದು ರಾಶಿದ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ಅನಂತರ ಇವರು ಕುಂಬ್ಡಾಜೆ ಬೆಳಿಂಜೆಗೆ ವಾಸ ಬದಲಾಯಿಸಿದ್ದರು. ಅಗೋಸ್ತ್ 7ರಂದು ಬೆಳಿಗ್ಗೆ 11.45ಕ್ಕೆ ಬಾಡಿಗೆ ಮನೆಯಲ್ಲಿ ಯುವತಿಗೆ ಹಲ್ಲೆಗೈದು ನಿಂದಿಸಿರುವುದಾಗಿಯೂ ಬಳಿಕ ಮೂರು ಬಾರಿ ತಲಾಖ್ ನುಡಿದು ವಿವಾಹ ಸಂಬಂಧವನ್ನು ಉಪೇಕ್ಷಿಸಿರುವುದಾಗಿ ರಾಶಿದ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page