ಕಾಸರಗೋಡು: ಕಾರು ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ಅಡ್ಕತ್ತಬೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಡೆದಿದೆ. ಅಡ್ಕತ್ತಬೈಲು ಕೋಟೆಹಿತ್ತಿಲು ನಿವಾಸಿ ಎಸ್‌ಟಿಯು ತಲೆಹೊರೆ ಕಾರ್ಮಿಕನಾಗಿರುವ ಎ.ಎ. ಯೂಸಫ್ ಎಂಬವರ ಪತ್ನಿ ನಸೀಯಾ (51) ಸಾವನ್ನಪ್ಪಿದ ದುರ್ದೈವಿ. ಇವರು ನಿನ್ನೆ ಸಂಜೆ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಅವರಿಗೆ ಕಾರು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಚೆಂಗಳ ಪಾಣಳದ ಅಡ್ಕತ್ತಿಲ್ ಮುಹಮ್ಮದಾಲಿ – ಖದೀಜ ದಂಪತಿ ಪುತ್ರಿಯಾಗಿರುವ ಮೃತರು ಪತಿ, ಮಕ್ಕಳಾದ ನೌಸಿಫ್, ವಹಾಬ್, ಸೌಫಲ್, ರಿಶಾನಾ ಮುಹಿನ್ನಿಸಾ, ನಫೀನಾ, ಅಳಿಯಂದಿರಾದ ಶಫೀಕ್, ಶರೀಫ್, ಶಾಬಿರ್, ಸಹೋದರ ಸಹೋದರಿಯರಾದ ಅಬ್ದುಲ್ಲ, ಅಸೈನಾರ್, ಸೈನುದ್ದೀನ್, ಹುಸೈನ್, ಅಹಮ್ಮದ್, ಉಸ್ತಾರ್, ಅಬ್ದುಲ್ ಸಲಾಂ, ಅಸಿಯಾ, ಮಿಸ್ರಿಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕಾಸರಗೋಡು ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.