ಮಂಜೇಶ್ವರ: ಮನೆಯ ಬಚ್ಚಲು ಕೋಣೆಯಲ್ಲಿ ಜಾರಿ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮಹಿಳೆಯೋರ್ವರು ನಿಧನ ಹೊಂದಿದ್ದಾರೆ. ಕಡಂಬಾರು ಕೆÀಳಗಿನಮನೆ ನಿವಾಸಿ ದಿ| ಸೀತಾರಾಮ ಸಪಲ್ಯರ ಪತ್ನಿ ಯಮುನ (68) ನಿಧನ ಹೊಂದಿದ್ದಾರೆ. ಸೋಮವಾರ ರಾತ್ರಿ ಮನೆಯ ಬಚ್ಚಲು ಕೋಣೆಯಲ್ಲಿ ಜಾರಿ ಬಿದ್ದಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಹಾಗೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ನಿಧನ ಹೊಂದಿದರು. ಮೃತರು ಮಕ್ಕಳಾದ ದೇವದಾಸ್, ಶಾಂತರಾಮ, ನವೀನ, ಸೊಸೆಯಂದಿರಾದ ಸುಜಾತ, ಬೇಬಿ, ಅಳಿಯ ಕೇಶವ, ಸಹೋದರಿ ಬೇಬಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪುತ್ರಿ ನಳಿನಾಕ್ಷಿ ಈ ಹಿಂದೆ ನಿಧನ ಹೊಂದಿದ್ದಾರೆ.
