ಕೋಟಯಂ: ರೋಗ ಬಾಧಿಸಿ ಹಾಸಿಗೆ ಹಿಡಿದಿದ್ದ ಮಹಿಳೆಯನ್ನು ಪತಿ ಕುತ್ತಿಗೆ ಹಿಸುಕಿ ಕೊಲೆಗೈದ ಘಟನೆ ಕೋಟಯಂನ ಕಿಡಂಗೂರ್ ಎಂಬಲ್ಲಿ ನಡೆದಿದೆ. ಮಾಂದಾಡಿಕ್ಕ ವಲಯಿಲ್ ಏಲಕ್ಕೋಡತ್ ವೀಟಿಲ್ ರಮಣಿ (70) ಎಂಬವರು ಕೊಲೆಗೀಡಾದವರು. ಈ ಸಂಬಂಧ ಪತಿ ಸೋಮನ್(74)ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ಇಂದು ಮುಂಜಾನೆ ಒಂದೂವರೆ ಗಂಟೆ ವೇಳೆ ಘಟನೆ ನಡೆದಿದೆ. ರಮಣಿಯನ್ನು ಕೊಲೆಗೈದ ಬಳಿಕ ಓರ್ವ ಪುತ್ರನನ್ನು ಕೊಲೆಗೈ ಯ್ಯಲು ಸೋಮನ್ ಯತ್ನಿಸಿದ್ದು, ಈ ವೇಳೆ ಬೊಬ್ಬೆ ಕೇಳಿ ಇನ್ನೋರ್ವ ಪುತ್ರ ತಲುಪಿ ತಡೆದಿದ್ದನೆನ್ನಲಾಗಿದೆ.
