ಕಾಸರಗೋಡು: ನಗರದ ಎಸ್‌ಟಿಯು ಕಾರ್ಯಕರ್ತ, ತಲೆಹೊರೆ ಕಾರ್ಮಿಕ ಕೆಲಸದ ಮಧ್ಯೆ ಕುಸಿದು ಬಿದ್ದು ಮೃತಪಟ್ಟರು. ಕೇಳುಗುಡ್ಡೆ ಸೀದಿ ಕಂಪೌಂಡ್‌ನ ದಿ| ಸಿ.ಬಿ. ಅಬ್ದುಲ್ಲ- ಆಚಿಬಿ ದಂಪತಿ ಪುತ್ರ ಸಿ.ಎ. ಹನೀಫ್ (52) ನಿಧನ ಹೊಂದಿದರು. ನಿನ್ನೆ ಮಧ್ಯಾಹ್ನ ಕೆಲಸದ ಮಧ್ಯೆ ಇವರು ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ವೇರ್ ಹೌಸ್‌ನಲ್ಲಿ ತಲೆಹೊರೆ ಕಾರ್ಮಿಕನಾಗಿದ್ದರು. ಮೃತರು ಪತ್ನಿ ಮುಮ್ತಾಜ್, ಮಕ್ಕಳಾದ ಸೈಯ್ಯಾಫ್ (ದುಬೈ), ಸಿರಾ, ಸಾಜುವಾ, ಸಹೋದರರಾದ ಸತ್ತಾರ್, ಜಮಾಲ್, ನಜೀಬ್, ಸಹೋದರಿಯರಾದ ಆಯಿಷಾ, ಉಮೈಬಾ, ಖೈರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
