ಉಪ್ಪಳ: ಪಚ್ಲಂಪಾರೆ ಎಸ್.ಸಿ ಕಾಲನಿ ನಿವಾಸಿ ರಾಮ ಯು.ಟಿ [65] ನಿಧನರಾದರು. ಸೋಮವಾರ ರಾತ್ರಿ ಇವರಿಗೆ ಎದೆನೋವು ಉಂಟಾಗಿದ್ದು ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ ನಿಧನ ಹೊಂದಿದರು. ಇವರು ಹಲವು ವರ್ಷಗಳಿಂದ ಉಪ್ಪಳ ಪೇಟೆಯಲ್ಲಿ ತಲೆಹೊರೆ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಸುಜಾತ, ಸುನಿಲ್, ಸುಜಿತ್, ಸುಧೀರ್, ಅಳಿಯ ಅಯ್ಯಪ್ಪ, ಸೊಸೆಯಂದಿರಾದ ಜಯಶ್ರೀ, ಜಯಶ್ರೀ, ಸಹೋದರಿ ಸುಂದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ತಂದೆ ತುಕ್ರ, ತಾಯಿ ತನಿಯಾರು, ಸಹೋದರ ರಾಘವ, ಸಹೋದರಿ ಕಮಲ ಈ ಹಿಂದೆ ನಿಧನರಾಗಿದ್ದಾರೆ.
