ಕುಂಬಳೆ: ಮನೆ ನಿರ್ಮಾಣ ಕಾಮಗಾರಿ ವೇಳೆ ಎರಡನೇ ಮಹಡಿಯಿಂದ ಬಿದ್ದು ಸೆಂಟ್ರಿಂಗ್ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಕುಂಬಳೆ ಶೇಡಿಕಾವು ನಿವಾಸಿ ಶಂಕರ್ ಯಾನೆ ಗಂಗು (52) ಮೃತಪಟ್ಟ ದುರ್ದೈವಿ. ಶನಿವಾರ ಮಧ್ಯಾಹ್ನ ೨ ಗಂಟೆ ವೇಳೆ ನಾರಾಯಣಮಂಗಲದಲ್ಲಿ ಎರಡಂತಸ್ತಿನ ಮನೆ ನಿರ್ಮಾಣ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ. ಕೆಳಕ್ಕೆ ಬಿದ್ದ ಶಂಕರ್‌ರನ್ನು ಇತರ ಕಾರ್ಮಿಕರು ಕೂಡಲೇ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ದಿ| ನಾರಾಯಣ ಶೆಟ್ಟಿ-ನಮ್ಮಕ್ಕ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿಯರಾದ ಸದಾ ಶೆಟ್ಟಿ, ವಿಮಲ, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.