ಕಾಸರಗೋಡು: ಅಡಿಕೆ ತೋಟ ದ ಕೆಲಸಕ್ಕೆ ತಲುಪಿದ ಯುವಕ ತೋಟದ ಮಾಲಕಿಯಾದ ಗೃಹಿಣಿ ಯ ಕುತ್ತಿಗೆ ಯಿಂದ ಚಿನ್ನದ ಸರ ಕಸಿದು ಪರಾರಿಯಾಗಲೆತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಕರ್ನಾಟಕದ ಚಿತ್ರದುರ್ಗ ನಿವಾಸಿಯಾದ ಮಂಜು ಯಾನೆ ಮಂಜುನಾಥ (35) ಎಂಬಾತನನ್ನು ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ.ಶೈನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಚೆಂಗಳ ಚೇರೂರು ಮೇನಂಕೋಡ್‌ನ ಬದ್ರಿ ಯಾ ಮಂಜಿಲ್‌ನ ಅಬ್ದುಲ್ ಖಾದರ್‌ರ ಪತ್ನಿ ಕುಂಞಿಬಿ (58) ಯವರ ಕುತ್ತಿಗೆಯಿಂದ ಸರ ಅಪಹರಿ ಸಲು ಆರೋಪಿ ಯತ್ನಿಸಿದ್ದಾನೆ. ನಿನ್ನೆ ಬೆಳಿಗ್ಗೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಮಂಜುನಾಥ ಅಡಿಕೆ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಂತೆ ತೋಟದ ಮಾಲಕಿ ಅಲ್ಲಿಗೆ ತಲುಪಿದ್ದರು. ಈ ವೇಳೆ ಚಿನ್ನದ ಸರ ಕಸಿದು ಪರಾರಿಯಾಗಲು ಆರೋಪಿ ಯತ್ನಿಸಿದ್ದಾನೆಂದು ದೂರಲಾಗಿದೆ. ಸೆರೆಗೀಡಾದ ಮಂಜುನಾಥನ ವಿರುದ್ಧ ಇದೇ ರೀತಿಯ ಬೇರೆ ಪ್ರಕರಣಗಳು ದಾಖಲಾಗಿ ವೆಯೇ ಎಂದು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.






