ಮುಳ್ಳೇರಿಯ: ಸಾಮಗ್ರಿಗಳನ್ನು ಮಾರಾಟ ಮಾಡಲೆಂದು ತಲುಪಿ ಬಾಲಕಿ ಸ್ನಾನ ಮಾಡುತ್ತಿದ್ದಾಗ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಯತ್ನಿಸಿದ ಯುವಕ ಸೆರೆಯಾಗಿದ್ದಾನೆ. ಮಲಪ್ಪುರಂ ನಿವಾಸಿಯಾದ ಪ್ರಜಿಲ್ (21)ನನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ಆದೂರು ಪೊಲೀಸರು ಆರೋಪಿಯನ್ನು ಸೆರೆ ದಾಖಲಿಸಿದ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಕಾರಡ್ಕ ಸಮೀಪದ ಪ್ರದೇಶವೊಂದರಲ್ಲಿ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಪ್ರಜಿಲ್ ಬಾಲಕಿಯ ಮನೆಗೆ ಡೈರೆಕ್ಟ್ ಮಾರ್ಕೆಟಿಂಗ್‌ಗಾಗಿ ತಲುಪಿದಾಗ ಆ ಮನೆಯಲ್ಲಿ ಇತರರಾರೂ ಇರಲಿಲ್ಲ. ಮನೆಯ ಹೊರಗಿರುವ ಸ್ನಾನದ ಕೊಠಡಿಯಲ್ಲಿ ನೀರು ಬೀಳುತ್ತಿರುವ ಶಬ್ದ ಕೇಳಿ ಯುವಕ ಅಲ್ಲಿಗೆ ತೆರಳಿ ಬಾಗಿಲ ಸಂದಿನಲ್ಲಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಯತ್ನಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಹೊರಗೆ ಯಾರೋ ಇದ್ದಾರೆಂದು ತಿಳಿದ ಬಾಲಕಿ ಹೊರಗೆ ಬಂದು ನೋಡಿದಾಗ ಈತ ಅಲ್ಲಿ ನಿಂತಿದ್ದನು. ಕೂಡಲೇ ಬಾಲಕಿ ಬೊಬ್ಬೆ ಹೊಡೆದಿದ್ದು ಆತ ಪರಾರಿಯಾಗಲು ಯತ್ನಿಸುತ್ತಿದ್ದ ಮಧ್ಯೆ ಸ್ಥಳೀಯರು ಬೆನ್ನಟ್ಟಿ ಸೆರೆಹಿಡಿದಿದ್ದಾರೆ. ಬಳಿಕ ಆದೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.







