ಉಪ್ಪಳ ಪೇಟೆಯಲ್ಲಿ ಯುವಕ ಕುಸಿದು ಬಿದ್ದು ಮೃತ್ಯು

ಉಪ್ಪಳ: ಉಪ್ಪಳ ಪೇಟೆಯಲ್ಲಿ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಉಪ್ಪಳ ಹಿದಾಯತ್ ಬಜಾರ್ ಬಿ.ಎಂ. ಮಾಹಿನ್ ಹಾಜಿ ರಸ್ತೆಯ ದಿ| ಅಬ್ದುಲ್ಲರ ಪುತ್ರ ಅಶ್ಪಾಕ್ (45) ಮೃತಪಟ್ಟ ವ್ಯಕ್ತಿ. 

ಕೂಲಿ ಕಾರ್ಮಿಕನಾದ ಅಶ್ಪಾಕ್‌ಗೆ ನಿನ್ನೆ ಮಧ್ಯಾಹ್ನ ಎದೆ ನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದರಿಂದ ಉಪ್ಪಳ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಬಳಿಕ ಮನೆಗೆ ತಲುಪಿ ವಿಶ್ರಾಂತಿ ಪಡೆದು ಸಂಜೆ ವೇಳೆ ಉಪ್ಪಳ ಪೇಟೆಗೆ ತೆರಳಿದ್ದರು. ಈ ವೇಳೆ ಅಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಾಯಿ ಖದೀಜ, ಪತ್ನಿ ಸರೀನ, ಮೂವರು ಮಕ್ಕಳು, ಸಹೋದರ ಸಹೋದರಿಯರಾದ ಅಶ್ರಫ್, ರೌಫ್, ಮುನೀರ್, ಆಯಿಷಾ, ಮೈಮೂನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page