ಕಾಸರಗೋಡು: ಸಂಚರಿಸುತ್ತಿ ರುವ ರೈಲಿನಿಂದ ಕೆಳಕ್ಕೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.
ಸಾವನ್ನಪ್ಪಿದ ಯುವಕನನ್ನು ಅಸ್ಸಾಂ ನಿವಾಸಿ ಸುಂದರ್ ಸೋರಾನ್ (33) ಎಂದು ಗುರುತಿಸಲಾಗಿದೆ. ತೃಕರಿಪುರ ರಾಮವಿಲ್ಯಂ ಕಳಗದ ಬಳಿಯ ರೈಲು ಹಳಿಯಲ್ಲಿ ಈತನ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದೆ. ಈತ ಧರಿಸಿದ ಶರ್ಟ್‌ನ ಜೇಬಿನಲ್ಲಿ ಪಾಲ ಕ್ಕಾಡ್‌ನಿಂದ ಕಾಸರಗೋಡಿಗೆ ತೆಗೆದ ರೈಲ್ವೇ ಟಿಕೆಟ್ ಪತ್ತೆಯಾಗಿದೆ. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಬಗ್ಗೆ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.