ಕಾಸರಗೋಡು: ಕಾರು ತೊಳೆಯುತ್ತಿದ್ದ ಮಧ್ಯೆ ಅನಿವಾಸಿಯಾದ ಯುವಕ ಕುಸಿದು ಬಿದ್ದು ಮೃತಪಟ್ಟರು. ಮಾಸ್ತಿಕುಂಡ್ ಚೂರಿಮೂಲೆ ನಿವಾಸಿ ರಿಯಾಸ್ (38) ಮೃತಪಟ್ಟವರು. ನಿನ್ನೆ ಸಂಜೆ ೫ ಗಂಟೆಗೆ ಮನೆಯ ಮುಂಭಾಗದಲ್ಲಿ ಕಾರು ತೊಳೆಯುತ್ತಿದ್ದ ಮಧ್ಯೆ ಕುಸಿದು ಬಿದ್ದಿದ್ದರು. ಕೂಡಲೇ ಚೆರ್ಕಳದ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇಂದು ಸಂಜೆ ಕೊಲ್ಲಿಗೆ ತೆರಳಲಿರುವ ಸಿದ್ಧತೆಯಲ್ಲಿದ್ದರು. ಇತ್ತೀಚೆಗೆ ನಡೆದ ಕೇರಳೋತ್ಸವದ ಕ್ರಿಕೆಟ್ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅನಿರೀಕ್ಷಿತ ನಿಧನ ಸ್ಥಳೀಯರಲ್ಲಿ ಹಾಗೂ ಸಂಬಂಧಿಕರಲ್ಲಿ, ಗೆಳೆಯರಲ್ಲಿ ದುಃಖವನ್ನುಂಟುಮಾಡಿದೆ. ಇಂದು ಬೆಳಿಗ್ಗೆ ಸಂಬಂಧಿಕರು ಹಾಗೂ ಗೆಳೆಯರ ಉಪಸ್ಥಿತಿಯಲ್ಲಿ ಪೊವ್ವಲ್ ಜುಮಾ ಮಸೀದಿಯಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು. ದಿ| ಮುಹಮ್ಮದ್ ಕುಂಞಿಯವರ ಪುತ್ರನಾಗಿದ್ದಾರೆ. ಮೃತರು ಪತ್ನಿ ಅನ್ಶರ, ಮಕ್ಕಳಾದ ಸಿದ್ಧಾನ್, ಫದ್ವ, ಸಹೋದರ- ಸಹೋದರಿಯರಾದ ಸೌದ, ಹಸೀನ, ಜಾಸ್ಮಿನ್, ಸಾಜಿದ, ನಸೀರ, ಹಾರಿಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






